ಬಾರೆ ಬ್ರಹ್ಮನ ರಾಣಿ - Baare Brahamana Rani

|| ಸರಸ್ವತಿ ಸ್ತುತಿ ||




ಬಾರೆ ಬ್ರಹ್ಮನ ರಾಣಿ ಬಾರೆ ಪನ್ನಗ ವೇಣಿ

ಬಾರೆ ನೀ ಕೀರವಾಣಿ ಬಾರೆ ಹಸೆಗೆ ವಾಣಿ

ಬಾರೆ ಸುಂದರ ಗಾತ್ರೆ ಬಾರೆ ಸುಚರಿತ್ರೆ 

ಬಾರೆ ಸುಜನ ಸ್ತೋತ್ರೇ ಬಾರೆ ಪವಿತ್ರೆ


ಒಡನಡುವಿಗೆ ತಕ್ಕ ಓಡಿಯಾಣವನ್ನು ಇಟ್ಟು

ಜಡೆ ಬಂಗಾರವ ತೊಟ್ಟು ಜಡೆಯ ಹೆಣೆದು ನೀನು 

ಜರತಾರಿ ಸೀರೆಯ ನೆರಿವಿಡಿದುಟ್ಟು

ವರ ನೊಸಲಿಗೆ ಕಸ್ತೂರಿ ತಿಲಕವಿನ್ನಿಟ್ಟು||೧||


ಸರಸಿಜ ಭವರಾಣಿ ಸರಗಳ ಧರಿಸಿ

ಪರಮ ಸಂತೋಷದಿ ಚರಣಗಳಿಟ್ಟು

ಮಂದಗಮನದಿಂದ ಅಂದುಗೆ ಕಿರುಗೆಜ್ಜೆ

ಅಂದದಿ ಧರಿಸುತ್ತ ಬಂದು ಕುಳ್ಳಿರು ತಾಯೆ||೨||


    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು