|| ದೇವಿ ಸ್ತುತಿ ||
ಜಯದೇವಿ ಜಯದೇವಿ ಮಹಾದೇವಿ
ಜಯದೇವಿ ಶ್ರೀದೇವಿ ಜಯಶಾಂಭವಿ
ಚಂಡಿ ಅವತಾರವನು ನೀ ತಾಳಿದೆ
ಚಂಡಮುಂಡರನು ತುಂಡರಿಸಿದೆ
ಶುಂಭ ನಿಶುಂಭರ ಸಂಹಾರಿಣಿ
ಅಂಬೆ ಜಗದಂಬೆ ಭಯಹಾರಿಣಿ
ತ್ರಿಮೂರ್ತಿಗಳಿಗೆ ವರವನಿತ್ತವಳೆ
ತ್ರಿಶೂಲದಿ ಬಿಡಾಲನ ಕೊಂದವಳೆ
ಮಧುಕೈಟಭರನು ವಧಿಸಿದ ದೇವಿ
ಮದವೇರಿದ ಮಹಿಷನ ಮೆಟ್ಟಿದ ದೇವಿ
ಧೂಮ್ರಲೋಚನನ ಬೂದಿಮಾಡಿದವಳೆ
ರಕ್ತಭೀಜಾಸುರನ ರಕ್ತಹೀರಿದವಳೆ
ನವಶಕ್ತಿ ನವದುರ್ಗೆ ಅವತಾರದವಳೆ
ನವರಾತ್ರಿಯ ಶುಭದಿನದಿ ಪೂಜೆಗೊಳ್ಳುವವಳೆ
0 ಕಾಮೆಂಟ್ಗಳು