ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ - Sharanembe Vani Poreye Kalyani

|| ಸರಸ್ವತಿ ಸ್ತುತಿಃ ||

ರಚನೆ - ಶ್ರೀ ಪುರಂದರದಾಸರು




ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ||ಪ||


ವಾಗಭಿಮಾನಿ ವರಬ್ರಹ್ಮಾಣಿ |

ಸುಂದರವೇಣಿ ಸುಚರಿತ್ರಾಣಿ ||೧||


ಜಗದೊಳು ನಿನ್ನ ಪೊಗಳುವೆನಮ್ಮ

ಹರಿಯ ತೊರಿಸೆಂದು ಪ್ರಾರ್ಥಿಪೆನಮ್ಮ |

ಪಾಡುವೆ ಶ್ರುತಿಯ ಬೇಡುವೆ ಮತಿಯ

ಪುರಂದರವಿಠಲನ ಹಿರಿಯ ಸೊಸೆಯ ||೨||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು