|| ಸರಸ್ವತಿ ಹಾಡು ||
ಶ್ರೀವಾಣಿ ಕಲ್ಯಾಣಿ ಗುಣಮಣಿ
ಲೋಕ ಜನನಿಯೆ ನಮಿಸುವೆವು
ಕೋಕಿಲವಾಣಿ ಫಣಿ ಸಮವೇಣಿ
ವೀಣಾ ಪುಸ್ತಕ ಧಾರಿಣಿ
|| ಶ್ರೀವಾಣಿ ಕಲ್ಯಾಣಿ ||
ವಿದ್ಯಾಧೀಶ್ವರಿ ವಿಧಿ ಪ್ರಾಣೇಶ್ವರಿ
ವರದಾಭಯಕರಿ ಶಂಕರಿ
ವಿದ್ಯಾಬುದ್ಧಿಗಳನುದಿನ ಕರುಣಿಸಿ
ಮುದ್ದು ಕುಮಾರಿಯ ರಕ್ಷಿಪುದು
|| ಶ್ರೀವಾಣಿ ಕಲ್ಯಾಣಿ ||
ಮಯೂರ ವಾಹನೆ ಮರಾಳಗಮನೆ
ಸುರನರ ಕಿನ್ನರನುತ ಚರಣೆ
ತೋಯಜ ನಯನೆ ಸುರಚರ ವದನೆ
ಭಾರತಿ ಶಂಕರಿ ನಮೋಸ್ತುತೆ
|| ಶ್ರೀವಾಣಿ ಕಲ್ಯಾಣಿ ||
0 ಕಾಮೆಂಟ್‌ಗಳು