ಸರಸಿಜೋದ್ಭವರಾಣಿ ಸರಸಿಜಾಸನ ವಾಣಿ - sarasijodbhavana Rani sarasijasana Vani

|| ಶಾರದಾ ಆರತಿ ಹಾಡು ||




ಸರಸಿಜೋದ್ಭವರಾಣಿ ಸರಸಿಜಾಸನ ವಾಣಿ

ಕಲ್ಯಾಣಿ ಗೀರ್ವಾಣಿ ನಿನಗಾರತಿ

ಸುಜ್ಞಾನವರ್ಷಿಣಿ ಬ್ರಹ್ಮಾಣಿ ಕಲ್ಯಾಣಿ

ಮಧುರವೀಣಾಪಾಣಿ ನಿನಗಾರತೀ

ಶ್ರೀಮಹಾಸರಸ್ವತಿ ನಿನಗಾರತೀ ||ಪ||


ಶ್ರೀಚಕ್ರರೂಪಿಣಿ ಶೃಂಗೇರಿವಾಸಿನಿ

ಶಾರದಾಮಾತೆಯೇ ನಿನಗಾರತೀ

ಗುರುವರ ಶಂಕರ ಸ್ಥಾಪಿತೆ ಪೂಜಿತೆ

ವರದೇಕೃಪಾಕರಿ ದೀಪಾರತೀ

ಶ್ರೀಮಹಾಸರಸ್ವತಿ ನಿನಗಾರತೀ ||ಚ||


ಕಾವ್ಯವಿಲಾಸಿನೀ ಗೀತಾವಿನೋದಿನೀ

ಶಾಸ್ತ್ರಸ್ವರೂಪಿಣಿ ನಿನಗಾರತೀ

ಸತ್ಯ ಸುಂದರ ಶಿವತತ್ವರೂಪಿಣಿ

ಪರಬ್ರಹ್ಮರೂಪಿಣಿ ನಿನಗಾರತಿ

ಶ್ರೀಮಹಾಸರಸ್ವತಿ ನಿನಗಾರತೀ ||ಚ||


ಶ್ರೀಮಹಾಸರಸ್ವತಿ ನಿನಗಾರತೀ

ಶ್ರೀಮಹಾಸರಸ್ವತಿ ನಿನಗಾರತೀ ||ಶುಭಂ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು