ನರವೃಂದ ಎಂಬೋ ಕಾನನದಲಿ - Naravrunda Embo Kananadali

|| ದೇವರಾನಾಮ ||

ರಚನೆ : ಪುರಂದರದಾಸರು



ನರವೃಂದ ಎಂಬೋ ಕಾನನದಲಿ

ಶ್ರೀಹರಿ ನಾಮವೆಂಬಂತ ಕಲ್ಪವೃಕ್ಷ 

ಹುಟ್ಟಿತಯ್ಯಾ....

ನೆಳಲು ಸೇರಲುಂಟು ,ಫಲವು ಮೆಲ್ಲಲುಂಟು

ನಾಲಿಗೆಯಲಿ ನಾಮತ್ರಯಗಳುಂಟೂ....

                                 ||ನರವೃಂದ||


ಇದೇ ಮನುಜರ ಕೊನೆಯ ಠಾವು

ಇದು ಬ್ರಹ್ಮಾದಿಗಳ 

ಸದಮಲ ಹ್ರದಯ ಪೀಠ

ಇದೇ ದ್ವಾರಕೆ , ಇದೇ ಕ್ಷೀರಾಂಭುಧಿ

ಇದೇ ಪುರಂದರವಿಠ್ಠಲನ ಮಂದಿರ||3||


ಏನ ಬೇಡಲಿ ನಿನ್ನ ಬಳಿಗೆ ಬಂದು||2||

ನೀನಿತ್ತ ಸೌಭಾಗ್ಯ  

ನಿಬಿಡವಾಗಿದೆ ಎನಗೇ||ಏನ ಬೇಡಲಿ||


ಬಂಧುಗಳ ಕೊಡು ಎಂದು 

ಚಂದದಲಿ ಬೇಡುವೆನೆ||ಬಂಧುಗಳ||

ಬಂಧುಗಳು ಏನಿತ್ತರಯಿ ಗಜರಾಜಗೆ....

ಅಂಧಣವ ಕೊಡು ಎಂದು 

ಅತಿಶಯದಿ ಬೇಡುವೆನೆ||ಅಂಧಣ||

ಅಂಧಣವ ಏರಿದ ನಹುಷ ಏನಾದರಯಿ.....

                                    ||ಏನ ಬೇಡಲಿ||


ಬೇಡುವೆನು ನಾನೊಂದ 

ಬೇಡತಕ್ಕುದ ದೇವ||ಬೇಡುವೆನು||

ನೀಡೆನೆಂಬುವುದು ನಿನ್ನ ಮನದಿಚ್ಛೆಯೆ....

ಮೂಡಲಾಧ್ರೀಶ ಶ್ರೀ ಗೋಪಾಲವಿಠ್ಠಲ||2||

ಬೇಡದಂತೆ ಪರರ ಮಾಡೆನ್ನ ದೊರೆಯೆ...

                                ||ಏನ ಬೇಡಲಿ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು