ಅಂಜನಾ ದೇವಿಗೆ ಸುತನಾಗಿ - Anjana Devige Suthanagi

|| ಹನುಮ ಸ್ತುತಿ ||




ಅಂಜನಾ ದೇವಿಗೆ ಸುತನಾಗಿ ಜನಿಸಿದ ಹನುಮ

ನಿನಗೆ ನಮೋ ನಮೋ

ಹನುಮ ನಿನಗೆ ನಮೋ ನಮೋ |

ಹನುಮ ನಿನಗೆ ನಮೋ ನಮೋ ||


ಅಂಜಾದ್ರಿ ಸೀತೆಗೆ ಉಂಗುರವಿಟ್ಟ

ನಿನ್ನ ಚರಣ ಕಮಲಕೆ ನಮೋ ನಮೋ ||

ದುರುಳಾಕ್ಷಯನ ಕೊರಳನು ಕೊಯ್ದ

ಶೂರ ಧೀರ ನಮೋ ನಮೋ|

ಭರದಿ ಲಂಕಾಪುರವನು ಹರಣಕೆ

ಆಹುತಿ ಇಟ್ಟನೆ ನಮೋ ನಮೋ||


ನಂದನ ಕಂದನ ಸುಂದರ ವದನನ

ನೆಂಟ ನಿನಗೆ ನಮೋ ನಮೋ

ಅಮೃತಶ್ರೀ ಸೌಗಂಧಿಕೆ ತಂದಿಟ್ಟ

ಕುಂತಿಯ ಕುಮಾರ ನಮೋ ನಮೋ ||


ಯತಿಯಾಗಿ ಶ್ರೀಪತಿಯ ಪ್ರೀತಿಯ ಪಡೆದ

ಮಧ್ವರಾಯ ನಿನಗೆ ನಮೋ ನಮೋ |

ಗತಿತೋರುವ ತಂದೆ ಪುರಂದರ ವಿಠಲನ

ದಾಸಾದಾಯಿಯೇ ನಮೋ ನಮೋ ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು