|| ಆರತಿ ಹಾಡು ||
ಆರತಿಯ ಬೆಳಗಿರೆ ಅರಸಿ ರುಕ್ಮಿಣಿಗೆ
ಆರತಿಯ ಬೆಳಗಿರೆ ||
ಅರಸಿ ರುಕ್ಮಿಣಿ ಕೂಡೆ ಅರಸು ವಿಠಲಗೆ
ಬಿರುದಿನ ಶಂಖವ ಪಿಡಿದ ವಿಠಲಗೆ ||
ಸರಸಿಜ ಸಂಭವ ಸನ್ನುತ ವಿಠಲಗೆ
ನಿರುತ ಇಟ್ಟಿಗೆ ಮೇಲೆ ನಿಂತ ವಿಠಲಗೆ||
ದಶರಥರಾಯನ ಉದರದಿ ವಿಠಲ
ಶಿಶುವಾಗಿ ಜನಿಸಿದ ಶ್ರೀರಾಮ ವಿಠಲ
ಪಶುಪತಿ ಗೋಪನ ಕಂದನೆ ವಿಠಲ
ಅಸುರೆ ಪೂತನಿಯ ಕೊಂದ ವಿಠಲಗೆ ||
ಕಂಡಿರ ಬೊಬ್ಬುರ ವೇಂಕಟವಿಠಲ
ಅಂಡಜವಾಹನ ಅಹುದೋ ನೀ ವಿಠಲ ||
ಪಾಂಡುರಂಗ ಕ್ಷೇತ್ರದ ಪಾವನ ವಿಠಲ
ಪುಂಡರೀಕಾಕ್ಷ ಶ್ರೀ ಪುರಂದರವಿಠಲಗೆ||
0 ಕಾಮೆಂಟ್‌ಗಳು