ಪಾಲಿಸೆಮ್ಮ ಮುದ್ದು ಶಾರದೆ - Palisemma Muddu Sharade

|| ಶಾರದಾ ಭಜನೆ ||




ಪಾಲಿಸೆಮ್ಮ ಮುದ್ದು ಶಾರದೆ

ಎನ್ನ ನಾಲಿಗೆಯಲಿ ತಪ್ಪು ಬಾರದೆ

ಲೋಲ ಲೋಚನೆ ತಾಯೆ 

ನಿರುತ ನಂಬಿದೆ ನಿನ್ನ ||


ಅಕ್ಷರಕ್ಷರ ವಿವೇಕವಾ ನಿಮ್ಮ ಕುಕ್ಷಿಯೊಳೀರೇಳು

ಲೋಕವ ಸಾಕ್ಷಾತ್ ರೂಪದಿಂದ

ಒಲಿದು ರಕ್ಷಿಸು ತಾಯೆ ||


ಶೃಂಗಾರಪುರ ನೆಲೆವಾಸಿನೀದೇವಿ|

ಸಂಗೀತಗಾನ ವಿಲಾಸಿನಿ ಮಂಗಳಗಾತ್ರೆ

ತಾಯೆ ಭಳಿರೆ ಬ್ರಹ್ಮನರಾಣಿ||


ಸರ್ವಾಲಂಕಾರ ದಯಾ ಮೂರತಿ

ನಿಮ್ಮ ಚರಣವ ಸ್ಮರಿಸುವೆ ಕೀರುತಿ

ಗುರುಮೂರ್ತಿ ಪುರಂದರ ವಿಠಲನ್ನ ಸ್ಮರಿಸುವೆ ||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು