ದೇವಿ ವರಲಕ್ಷ್ಮಿ ಭಕ್ತರ ಕಾಯ್ವಿ - Devi Varalakshmi Bhakthara Kayvi

 || ದೇವಿ ಹಾಡು ||



ದೇವಿ ವರಲಕ್ಷ್ಮಿ ಭಕ್ತರ ಕಾಯ್ವಿ

ಕರುಣದಿ ವರವ ನೀಡಿ|| 


ಸಿಂಧುಶಯನನ ದಯೆ

ಎಂದೆಂದು ಬಿಡದಂತೆ

ಚಂದದಿ ಕರುಣಿಸೆ ಇಂದಿರೇನಮಗೆ||


ಮಂದಗಮನೆಯರು ತಂದಮಂದಾರಮಲ್ಲಿಗೆ

ಗಂಧ ಕುಂಕುಮದಿಂದ ಚಂದಾಗಿ

ಅರ್ಚಿಸೆ ದೇವಿ ನಿನಗೆ||


ಮಿತ್ರವಿಂದಾದಿಗಳಿಂದ

ಮತ್ತೊಮ್ಮೆ ಲಕುಮಿಯೆ

ಮುತ್ತು ರತ್ನದ ವಸ್ತು ವಸ್ತ್ರ ವೀಳ್ಯವ ಕೊಳ್ಳದೇವಿ|| 


ನಗಧರ ರಾಮೇಶನು

ಅಗಲದಂತೆ ನಮ್ಮ

ಮುಗಿದೇವು ಕರಗಳ ನಗೆಮುಖದ ಗೌರಿ ನಿನಗೆ ದೇವಿ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು