ಕಣ್ಣ ತುಂಬಾ ಕಂಡೆ ನಮ್ಮ - Kanna Thumba Kande Namma

|| ಲಕ್ಷ್ಮಿ ಹಾಡು ||





ಕಣ್ಣ ತುಂಬಾ ಕಂಡೆ ನಮ್ಮ ಕಮಲ ನೇತ್ರೆಯ

ವರ್ಣಿಸಲೇನಿಂದ ತರವೇ ಭಾಗ್ಯಲಕ್ಷ್ಮಿಯ||ಪ||


ಕರ್ಣಾದಿ ಭೂಷಣ ಧರಿಸಿ

ಕೆನ್ನೆಗೆ ಅರಿಶಿಣವನ್ನೇ ಪೂಸಿ

ಕಣ್ಣಿಗೆ ಅಂಜನವನ್ನು ಹಚ್ಚಿದ ಕದಪು ಹೊಳೆಯುತ್ತ||1||


ಸಣ್ಣ ನಡುವಿನ ಬಾಲೆ ಸರಿಗೆ ಪೀತಾಂಬರದ ಮೇಲೆ

ಚಿನ್ನದ ಓಡ್ಯಾಣವನಿಟ್ಟ ಚೆಲುವ ಮೂರ್ತಿಯ||2||


ಕೊರಳ ಹಾರ ಪದಕ ಮಧ್ಯ

ಹೊಳೆಯುತ್ತಿರುವ ಸರಿಗೆಗುಂಡು

ಕಿರುನಗೆಯ ಸೂಸುತ್ತಿರುವ ಚೆಲುವ ಮೂರ್ತಿಯ||3||


ಕರವೀರ ಪುರದಲ್ಲಿ ನೆಲೆಸಿ

ತರುಣಿಯರಿಗೆ ವರವ ಸಲ್ಲಿಸಿ

ಸಿರಿ ಸಂಪದ ಸೌಭಾಗ್ಯವನೀವ

ವರ ಮಹಾಲಕ್ಷ್ಮಿಯ||4||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು