|| ರಾಘವೇಂದ್ರ ಸ್ತುತಿ ||
ಜನಮನದಲಿ ಸದ್ಭಾವನೆ ಬಿತ್ತಲು
ಇನ್ನೊಮ್ಮೆ ಬಾ ಗುರುರಾಯ |
ಪಾಪವಿಲೋಕದಿ ತುಂಬಿ ನಿಂತಿದೆ
ಪಾಪಹರಣ ನೀ ಬೇಗನೆ ಬಾರೋ ||ಪ||
ತನುಮನ ಧನವನು ನಿನಗರ್ಪಿಸಿದೆ |
ಇನಿತು ಪೇಳುತಲಿ ನಾ ಪಾಪದಿ ನೊಂದೆ ||
ದೀನರ ರಕ್ಷಿಸು ಎಂದು ನಾ ಬೇಡಿದೆ |
ಗುರುರಾಜ ನಿನ್ನ ಕಾಡಿ ನಾ ಬೇಡಿದೆ ||೧||
ಗಂಗಾ ನದಿಯ ಚೆಲ್ವಿಕೆ ಪಡೆದ |
ತುಂಗೆಯ ದಡದಲ್ಲಿ ವಾಸ ಮಾಡಿದ ||
ಜನುಮ ಜನುಮಗಳ ಪಾಪವ ತೊಳೆಯಲು |
ರಾಘವೇಂದ್ರಗುರು ಇನ್ನೊಮ್ಮೆ ನೀ ಬಾರೋ ||೨||
ಮಂತ್ರಾಲಯದ ಚೆಲುವ ಚಂದಿರ |
ಅಂತರಗದಲ್ಲಿ ನೆಲೆಸಿ ನಿರಂತರ ||
ಕಂತುಪಿತನೇ ಶ್ರೀ ಪ್ರಾಣೇಶ ವಿಠಲನೆ |
ಸಂತಸದೀ ನೀ ಭಕುತರ ಪೊರೆಯಲು ||೩||
0 ಕಾಮೆಂಟ್‌ಗಳು