|| ತುಳಸಿ ಹಾಡು ||
ನಮೋ ಶ್ರೀ ತುಳಸಿ |
ಪಾಹೀ ಪಾಹೀ ಕುಮತಿಯ ಪರಿಹರಿಸಿ ||
ಅಮಿತ ಮಹಿಮೆ ಸದ್ಗುಣಗಳ ಪೂರ್ಣಿ |
ಕಮಲೇಕ್ಷಣ ಮಧುಸೂಧನನರಸಿ |
ಅಂದಿನ ಕಾಲದಲ್ಲಿ ಹರಿಪಾದ ವಂದಿಸಿ ಭಕುತಿಯಲಿ
ಅಂದದಿ ವರಪಡೆಗಿಂದಿಗೂ ಸರ್ವರ
ಮಂದಿರದೊಳಗೆ ಪೂಜೆಯಗೊಳುತಲಿ ||1||
ನಾ ನಂಬಿದೆ ನಿನ್ನ ದೇವತಾ ಮಾನಿನಿ ಮಣಿ ಇನ್ನಾ
ಹೀನದಿ ಎಣಿಸದೇ ಕರುಣಿಸಿ ಸರ್ವರ
ಪ್ರಾಣೇಶ ವಿಠಲನ ಧ್ಯಾನದೊಳಿಡಿಸಿ ||2||
0 ಕಾಮೆಂಟ್‌ಗಳು