|| ದೇವರ ನಾಮ ||
ಕೃಷ್ಣಾ ನೀ ಬೇಗನೇ ಬಾರೋ ||
ಬೇಗನೇ ಬಾರೋ|ಮುಖವನ್ನೆ ತೋರೋ ||ಪ||
ಹುಟ್ಟಿದ್ದು ಮಧುರೇಲಿ ಬೆಳದದ್ದು ಗೋಕುಲ |
ಜಲಕ್ರೀಡೆಯ ನಾಡಿದ್ದು ಯಮುನಾ ತೀರಾ ||೧||
ಕಾಶಿ ಪೀತಾಂಬರ ಕೈಯಲ್ಲಿ ಕೊಳಲು |
ಪೂಸಿದ ಶ್ರಿಗಂಧ ಮೈಯೊಳಗಮ್ಮಾ ||೨||
ಉಡಿಯಲ್ಲಿ ಉಡಿಗೆಜ್ಜೆ ಬೆರಳಲ್ಲಿ ಉಂಗುರ |
ಕೊರಳಲ್ಲಿ ಹಾಕಿದ ವೈಜಯಂತಿಮಾಲಾ ||೩||
ಕಾಲಲಂದುಗೆ ಗೆಜ್ಜೆ ನೀಲಾದ ಬಾವುಲಿ |
ನೀಲಿವರ್ಣನ ನಾಟ್ಯವಾಡುತ ಬಾರೋ ||೪||
ತಾಯಿಗೆ ಬಾಯಲ್ಲಿ ಜಗವನ್ನೆ ತೋರಿದ |
ಜಗದೋದ್ಧಾರಕ ನಮ್ಮ ಉಡುಪಿ ಶ್ರೀ ಕೃಷ್ಣ ||೫||
0 ಕಾಮೆಂಟ್‌ಗಳು