ಮಾನವ ಜನ್ಮ ದೊಡ್ಡದ್ದು - Manava Janma Doddadu

|| ದೇವರ ನಾಮ ||

ರಚನೆ : ಪುರಂದರದಾಸರು




ಮಾನವ ಜನ್ಮ ದೊಡ್ಡದ್ದು

ಇದ ಹಾನಿ ಮಾಡಲಿಬೇಡಿ ಹುಚ್ಚಪ್ಪಗಳಿರ


ಕಣ್ಣು ಕೈಕಾಲ್ ಕಿವಿ ನಾಲಿಗೆ ಇರಲಿಕ್ಕೆ

ಮಣ್ಣು ಮುಕ್ಕಿ ಮರುಳಾಗುವರೆ


ಹೆಣ್ಣು ಮಣ್ಣಿಗಾಗಿ ಹರಿಯ ನಾಮಾಮೃತ

ಉಣ್ಣದೆ ಉಪವಾಸ ಮಾಡುವರೆ


ಕಾಲನ ಧೂತರು ಕಾಲ್ಪಿಡಿದೆಳೆವಾಗ

ತಾಳು ತಾಳೆಂದರೆ ತಾಳುವರೆ


ಧಾಳಿ ಬಾರದ ಮುನ್ನ ಧರ್ಮವ ಕೈಕೊಳ್ಳಿ

ಸುಳ್ಳಿನ ಸಂಸಾರ ಸುಳಿಗೆ ಸಿಲುಕುವರೆ


ಏನು ಕಾರಣ ನೀವು ಯದುಪತಿಯ ಮರೆತಿರಿ

ಧನಧಾನ್ಯ ಸತಿಸುತರದು ನಿತ್ಯವೆ


ಇನ್ನಾದರೂ ನೀವು ಏಕಭಾವದಿಂದ

ಚನ್ನ ಶ್ರೀ ಪುರಂದರ ವಿಠಲರಾಯನ ಭಜಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು