ನಾ ನಿನ್ನ ಧ್ಯಾನದೊಳಿರಲು ರಂಗ - Naa Ninna Dhyanadoliralu Ranga

|| ದೇವರ ನಾಮ ||

ರಚನೆ : ಪುರಂದರದಾಸರು




ನಾ ನಿನ್ನ ಧ್ಯಾನದೊಳಿರಲು ರಂಗ 

ನಾ ನಿನ್ನ ಧ್ಯಾನದೊಳಿರಲು ||ಪ||

ಮಿಕ್ಕ ಹೀನಮಾನವರೇನು ಮಾಡಬಲ್ಲರೋ ರಂಗ||ಅ.ಪ|| 


ಮತ್ಸರಿಸುವರೆಲ್ಲ ಕೂಡಿ ಮಾಡುವರೇನು 

ಅಚ್ಯುತ ನಿನ್ನದೊಂದು ದಯೆಯಿರಲು


ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ 

ಕಿಚ್ಚಿಗೆ ಇರುವೆ ಮುತ್ತುವುದೆ ಕೇಳೆಲೋ ರಂಗ||೧||


ಧಾಳಿಲಿ ಕುದುರೆ ವೈಯಾರದಿ ಕುಣಿಯಲು 

ಧೂಳು ರವಿಯ ಮೇಲೆ ಮುಸುಕುವುದೆ


ತಾಳಿದವರಿಗೆ ವಿರುದ್ಧ ಲೋಕದೊಳುಂಟೆ 

ಗಾಳಿಗೆ ಗಿರಿಯು ಅಲ್ಲಾಡಬಲ್ಲುದೆ ರಂಗ||೨||


ಕನ್ನಡಿಯೊಳಗಿನ ಗಂಟು ಕಂಡು 

ಕಳ್ಳ ಕನ್ನವಿಕ್ಕಲವನ ವಶವಹುದೆ


ನಿನ್ನ ನಂಬಲು ಮುದ್ದು ಪುರಂದರ ವಿಠಲ 

ಚಿನ್ನಕ್ಕೆ ಪುಟವಿಟ್ಟಂತೆ ಆಹುದು ರಂಗ ||೩||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು