|| ಹನುಮ ಸ್ತುತಿ ||
ನಂಬಿ ಬಂದೆ ಮುಖ್ಯಪ್ರಾಣ
ತುಂಬಿ ಕೊಂಡೆ ರಾಮಧ್ಯಾನ
ಶಂಭುಶಿವನ ಅಂಶ ದೇವ
ಇಂಬು ನೀಡಿ ಕಾಯೋ ತಂದೆ ||ನಂಬಿ||
.
ಮಧುರಭಾಷೆ ಆಂಜನೇಯ
ಮದವಿನಾಶಿ ವಜ್ರಕಾಯ||ಮಧುರ||
ರಾಮಚರಣ ಶರಣ ನಿನ್ನಾ
ನಾಮ ಭಜಿಪೆ ಕಾಯೋ ಎನ್ನಾ ||ನಂಬಿ||
ಅಂಬುಧಿ ಜಿಗಿದ ಅಮಿತ ತ್ರಾಣ
ಶುಭವ ನೀಡೋ ಮುಖ್ಯಪ್ರಾಣ ||ಅಂಬುಧಿ||
ಸ್ವಾಮಿ ಭಕ್ತ ವಾಯುಜಾತ
ಪ್ರೇಮದಿಂದ ಸಲಹೋ ದೇವ ||ನಂಬಿ||
ಅಗಜಗೊಲಿದ ಕದನವೀರ
ಜಗದಿ ಮೆರೆದ ನಿಜ ಉಧ್ಧಾರ ||ಅಗಜ||
ಅಷ್ಠಸಿಧ್ಧಿಯಿಂದ ನಲಿದ
ಇಷ್ಟದೇವಾ ನೆನೆವೆ ನಿನ್ನ ||ನಂಬಿ||
ನುಡಿಸು ನಡೆಸು ಮುಖ್ಯಪ್ರಾಣ
ಒಡಿಯೂರೊಡೆಯ ಶರಣು ಬಂದೆ||ನುಡಿಸು||
ಮ್ರಢನ ರೂಪ ಜ್ಞಾನದೀಪ
ಗುಡಿಯ ಬೆಳಗು ಬಾಗಿನಿಂದೆ ||ನಂಬಿ||
0 ಕಾಮೆಂಟ್‌ಗಳು