|| ಶ್ರೀ ವೆಂಕಟೇಶ್ವರ ಸ್ತುತಿ ||
ನೋಡಿರೆ ಶ್ರೀಭೂರಮಣನ ವರ
ಬೇಡಿರೆ ಮನೋಭೀಷ್ಟವೀವನ॥ಪ॥
ಗಾಡಿಕಾರನ ಮುರಳೀಧರನ
ಗೂಢಪದಗಿರಿ ವೇಂಕಟೇಶನ
ಪಂಢರೀಶ ಪಾಂಡುರಂಗನ
ಪುಂಡರೀಕಾಕ್ಷ ಶ್ರೀಗೋಪಾಲನ ॥೧॥
ಧನುವನು ಭಂಗಿಸಿ ಸೀತೆಯ ಪಡೆದ
ದೀನಜನರಪಾಲ ಶ್ರೀರಾಮಚಂದ್ರ ||
ಭಾನುಕೋಟಿತೇಜ ಸುಪ್ರಕಾಶ
ಶ್ರೀನಿವಾಸ ಸರ್ವೇಶ ಈಶ ||೨||
ಸಿರಿವಾಮನ ವಿಠಲ ಭಕ್ತರ ಪೋಷಕ
ಮಾರುತವಂದಿತ ಸಾಕೇತವಾಸ ||
ಸುರೇಶ ವರಗಿರಿ ವೇಂಕಟವಾಸ
ಚರಣಸೇವಕರ ಸ್ವಾಮಿ ಲಕ್ಷ್ಮೀಶ ||೩|
0 ಕಾಮೆಂಟ್‌ಗಳು