ಜೋ ಜೋ ರಂಗಧಾಮ - Jo Jo Rangadhama

|| ಲಾಲಿ ಹಾಡು ||




ಜೋ ಜೋ ಜೋ ಜೋ ಜೋ ರಂಗಧಾಮ

ಜೋ ಜೋ ಜೋ ಜೋ ಜೋ ರಣಭೀಮ ||ಪ ||


ಜೋ ಜೋ ಭಕ್ತರ ಕಷ್ಟನಿರ್ಧೂಮಜೋ

ಜೋ ದಶರಥ ರಾಮ ನಿಸ್ಸೀಮ||ಅ .ಪ||


ಭೂಮಿಯ ಚಿನ್ನದ ತೊಟ್ಟಿಲ ಮಾಡಿ

ಸೋಮಸೂರ್ಯರೆಂಬ ಕಲಶವ ಹೂಡಿ

ನೇಮದಿ ವೇದಗಳ ಸರಪಣಿ ಮಾಡಿ

ಆ ಮಹಾಕಾಶಕ್ಕೆ ಕೊಂಡಿಗಳ ಹಾಕಿ||1||


ಸರಸಿಜೋದ್ಭವ ಸರಸ್ವತಿ ಭಾರತಿ

ಗರುಡಶೇಷ ರುದ್ರರಿವರ ಸತಿಯರು

ಸುರರ ಕಿನ್ನರರು ಕಿಂಪುರುಷ ನಾರದರು

ಪರಿಪರಿ ಗೀತದಿ ತುತಿಸಿ ಪಾಡಿದರು ||2||


ವಸುದೇವ ಸುತನಾದ ಮುದ್ದು ಮುರಾರಿ

ಅಸುರೆ ಪೂತನಿಯ ಪ್ರಾಣಾಪಹಾರಿ

ಅಸಮ ಸಾಹಸಮಲ್ಲ ದೈತ್ಯರ ವೈರಿ

ಶಿಶುವಾಗಿ ದೇವಕೀಗಾನಂದ ತೋರಿ ||3||


ಜಗವನು ಹೊಟ್ಟೆಯೊಳಿಂಬಿಟ್ಟೆ ತ್ರುವ್ವಿ

ಜಗವೆಲ್ಲ ನಿರ್ಮಾಣ ಮಾಡಿದೆ ತ್ರುವ್ವಿ

ನಿಗಮಗೋಚರ ನಿತ್ಯಾನಂದನೆ ತ್ರುವ್ವಿ

ಮಗುವೆಂದು ನಾವ್ ತೂಗಬಲ್ಲೆವೆ ತ್ರುವ್ವಿ||4||


ತಮನ ಮರ್ದಿಸಿ ವೇದತತಿಗಳನು ತಂದೆ

ಸುಮನಸರಿಗಾಗಿ ಮಂದರ ಪೊತ್ತು

ನಿಂದೆಕ್ಷಮೆಗಾಗಿ ಪೋಗಿ ಹಿರಣ್ಯಕನ ಕೊಂದೆ

ನಮಿಸಿ ಕರೆದರೆ ಕಂಬದಿಂದ್ಹೊರಟು ಬಂದೆ ||5||


ತರಳನಾಗಿ ಬಲಿಯ ದಾನವ ಬೇಡ್ದೆ

ಪರಶು ಧರಿಸಿ ಕ್ಷತ್ರಿಯರ ಸವರಿದೆದುರುಳ

ರಾವಣನ ಶಿರವ ಚೆಂಡಾಡಿದೆಚರಿಸಿ

ಮನೆಗಳ ಪಾಲ ಮೊಸರನ್ನು ಕುಡಿದೆ ||6||


ಬುದ್ಧನಾಗಿ ಪತಿವ್ರತೆರನಾಳಿದೆಯಲ್ಲ

ಮುದ್ದು ತುರಗವನೇರಿ ಕಲ್ಕ್ಯನಾದ್ಯಲ್ಲ

ಪದ್ಮನಾಭ ಸರಿ ಭಕ್ತವತ್ಸಲ ನಿದ್ರೆಯ

ಮಾಡಯ್ಯ ಶ್ರೀ ರಂಗವಿಠಲ ||7||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು