ವೇಂಕಟಾಚಲ ಪಂಚಮಿ - Venkatachala Panchami

|| ವೇಂಕಟಾಚಲ_ಪಂಚಮಿ ||

ರಚನೆ : ಅಂಬಾಸುತ



ಪಂಚಮಿ ಪುಣ್ಯ ದಿನ ಪ್ರಪಂಚವೇ ತಾನಾದ

ಪರಮಾತ್ಮ ಗುರುನಾಥ ಅವಧೂತ...||ಪ||

ಅಷಾಢದ ಮಾಸ ಪಕ್ಷವು ಕೃಷ್ಣವು

ಪುಣ್ಯಕಾಲವದು ಪ್ರಪಂಚದಾಟದೊಳು....||ಅ.ಪ||


ಸೇವೆ ಸಾಧನೆಯೆಂದು ಸಾರಿದ ಸಾಧು

ಗುರುತತ್ವವ ಬೋಧಿಸಿದಾ ಆತ್ಮಬಂಧು

ಭಕುತರ ಪಾಲಿನ ಭಗವಂತನು ಇಂದು

ಬದುಕುವುದ ಬದುಕಿ ತೋರಿಸಿದಾ ಜ್ಞಾನ ಸಿಂಧು...||೧||


ನೊಂದವರ ನೋವಿಗೆ ತಾಯ್ಮಡಿಲಾದ

ಬಂದವರ ಹಸಿವ ಪೂರ್ಣದಿ ತಣಿಸಿದ

ದಾರಿ ಕಾಣದೆ ನಿಂತವರ ಕೈಪಿಡಿದು

ನೆಡೆಸಿದ ಮಾರ್ಗಬಂಧು ಗುರಿ ತೋರಿಸಿದಾ...||೨||


ಭಾವದ ಒಳಗಿಹೆನು ದೇಹದೊಳಲ್ಲ...

ಎನುತ ಸಂತೈಸಿದ ನಿಜ ಭಾಗ್ಯ ವಿಧಾತ

ಸುಖಪುರದವ ಸಮಚಿತ್ತವ ನೀವಾತ

ಅಂಬಾಸುತನ ಅಂತರಂಗದ ದೊರೆ ಖ್ಯಾತ...||೩||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು