|| ಶ್ರೀರಾಮ ಮಂಗಳ ||
ಮಂಗಳಂ ಜಯ ಮಂಗಳಂ|
ಶುಭ ಮಂಗಳಂ ಶ್ರೀ ರಾಮಗೆ ||
ಭಾನು ಕುಲದಲಿ ಜನಿಸಿದವಗೆ |
ಭಕ್ತ ಜನ ಪರಿಪಾಲಗೆ॥
ಲೀಲೆಯಿಂದಲಿ ವಾಲಿ ನಿಗ್ರಹ
ಮಾಡಿದ ಭೂಪಾಲಗೆ
ದಂಡಕಾರಣ್ಯಕ್ಕೆ ಪೋಗಿ |
ಚಂಡ ದೈತ್ಯರ ಗೆಲಿದಗೆ॥2॥
ಅಂಡ ಪಿಂಡ ಬ್ರಹ್ಮಾಂಡ ನಾಯಕ |
ಆದಿ ಕೋದಂಡರಾಮಗೆ ||
ತಾಟಕಿಯ ಕೊಂದವಗೆ |
ಘೋರಡವಿಯ ಸಂಚಾರಿಗೆ ॥2॥
ಆಟಕೊಜ್ವಲ ಕಾಂತಿ ಶೋಭಿತ ।
ದಿವ್ಯ ರತ್ನ ಕಿರೀಟಿಗೆ||
0 ಕಾಮೆಂಟ್‌ಗಳು