ಭಜರೇ ಶ್ರೀ ರಾಮಂ ಮಾನಸ - Bhajare Sri Ramam Manasa

|| ರಾಮ ಭಜನೆ ||

ರಾಗ - ನಾದನಾಮಪ್ರಿಯ 



ಭಜರೇ ಶ್ರೀ ರಾಮಂ|ಮಾನಸ|ಭಜರೇ ರಘುರಾಮಂ|

ಭಜ ರಘುರಾಮಂ|ಭಜಕ ಮಂದಾರಂ|

ಸುಜನೋದ್ಧಾರಂ ದೈತ್ಯವಿದೂರಂ॥ 


ದಶರಥ ನಂದನ ಸಕಲ ಗುಣೇಶಂ

ಋಷಿ ಕೌಶಿಕಮುಖ ಪಾಲನತೋಷಂ ॥೧॥ 


ದನುಜ ಸುಬಾಹು ತಾಟಕ ಶಿಕ್ಷಂ |

ಮುನಿಗೌತಮ ಸತೀ ಶಾಪ ವಿಮೋಕ್ಷಂ ॥೨॥ 


ವರಶೋಭಿತ ಮಿಥಿಲಾಪುರ ಗಮನಂ |

ಪುರಹರಚಾಪ ವಿಖಂಡ ಪ್ರವೀಣಂ ॥೩॥ 


ಜನಕಜಾಪಾಣಿ ಗ್ರಹಣ ವಿನೋದಂ |

ಘನಭಾರ್ಗವಮದ ಭಂಗಿತಮೋದಂ ॥೪॥ 


ಸುಲಲಿತಾಯೋಧ್ಯಾ ನಗರ ಪ್ರವೇಶಂ |

ಜಲಜ ಭವಸ್ತುತ ಚರಣ ಮಹೇಶಂ ॥೫॥ 


ಪಿತುರಾಜ್ಞ್ಯ ಪರಿ ಪಾಲನತೋಷಂ |

ಸತೀಲಕ್ಷ್ಮಣಸಹ ಗಹನನಿವಾಸಂ ॥೬॥ 


ಕ್ರೂರದಾನವೀಕೃತ ನಾಸಿಕಾದಾರಂ ॥

ಘೋರದೂಷಣಖರ ತ್ರಿಶಿರ ಸಂಹಾರಂ ॥೭॥ 


ಅತಿಬಲಮಾಯಾ ಮಾರೀಚ ವಿಘಾತಂ 

ಪಥಿಕಜಟಾಯು ಕೈವಲ್ಯ ಪ್ರದಾತಂ ||೮॥ 


ಪಂಪಾತೀರಂ ಇನಸುತಭಾಷಂ |

ಸಂಪತ್ಕರ ಮುಖ|ಕಮಲ ಮಹೇಶಂ ॥೯॥


ಇನಜಸಖಿತ್ವಾ ನಂದಮನಂತಂ|

ಘನಮದ ವಾಲಿನಿಗ್ರಹ ವಿಖ್ಯಾತಂ ||೧೦||


ಅಗಣಿತ ವಾನರ ಸೈನ್ಯ ಸಮೇತಂ |

ಸುಗುಣ ಶರಧಿಬಂಧ ಮಜತಾತಂ ॥೧೧||


ದಶವದನಾದಿ ಖಲೌಘವಿನಾಶಂ |

ಅಸಮದಿವಿಜ ಪರಿ ಪಾಲನ ಹಾಸಂ ॥೧೨॥ 


ವರಲಂಕಾಪುರ ಪದವೀ ಮಹೇಶಂ |

ಶರಣ ವಿಭೀಷಣೋದಾರ ಕೃಪೇಶಂ ॥೧೩॥ 


ಅನುಜ ಸೀತಾಂಗನಾ ವನಚರ ಪಾಂಥಂ ।

ಪುನರಾಗಮ ಶ್ರೀ ರಘುಕುಲನಾಥಂ ॥೧೪॥ 


ಸಾಕೇತಪುರಿ ಪಟ್ಟಾಭಿಷೇಕಂ ।

ಶ್ರೀಕರ ವೇಂಕಟ ಪಾಲಿತಲೋಕಂ ॥೧೫॥ 


ಜಿತಕಾಮಾಂತಂ ಜಾನಕೀ ಕಾಂತಂ |

ನತಹನೂಮಂತಂ ನಿಯತಸ್ವಾಂತಂ ||೧೬॥ 


ಮನುಕುಲಭೂಷಂ ಮನುಜ ಸುವೇಶಂ |

ಮುನಿಜನ ಪೋಷಂ ತ್ರೈಜಗದೀಶಂ ॥೧೭॥ 


ಕರಧೃತ ಚಾಪಂ ಜನದುರವಾಪಂ ।

ಪರಿಹೃತಪಾಪಂ ಪಾವನರೂಪಂ ॥೧೮॥ 


ಭಜ ರಘುವೀರಂ ಸುಜನೋದ್ಧಾರಂ |

ಕುಜನ ಕುಠಾರಂ ಕೃತಜನ ಪಾರಂ ॥೧೯॥ 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು