|| ಹರಿ ಸ್ತುತಿ ||
ಎಂದಿಗಾವುದೋ ನಿನ್ನ ದರುಶನ ॥
ಇಂದಿರೇಶ ಶ್ರೀ ಗೋವಿಂದಾ ಮುಕುಂದ॥
ತಂದೆ ತಾಯಿ ನೀನೇ ಬಂಧು ಬಳಗ ನೀನೇ
ಎಂದು ಭಜಿಸುವಾ ಆನಂದ ಗೋವಿಂದಾ|
ಸರಸಿಜೋದ್ಭವಾ ಶ್ರೀ ಹರೀಶನಾದ
ನಿನ್ನ ಸ್ಮರಿಸುವಾ ಸುಖ ॥೧॥
ಅಜಭವಾದಿಗಳು ಆನಂದದಿಂದಲಿ
ಭಜಿಸಿ ಪಾಡುವ ನಿನ್ನ ಸುಖವು
ದೀನವತ್ಸಲ ಶ್ರೀನಿಕೇತನ
ಮಾನದಿಂದ ನಿನ್ನ ಧ್ಯಾನವೇ ಸುಖವು॥೨॥
ಭಯನಿವಾರಣ ಭಕ್ತವತ್ಸಲ
ವಿಜಯಸಾರ ಶ್ರೀ ವಿಜಯ ವಿಠಲನೆ||೩||
0 ಕಾಮೆಂಟ್‌ಗಳು