ಎತ್ತಲೊ ಮಾಯವಾದ ಮುತ್ತಿನ ಮೂಗುತಿ ನೀನು - Ettalo Mayavada Muttina Muruthi Neenu

|| ಮಾರುತಿ ಭಜನೆ ||




ಎತ್ತಲೊ ಮಾಯವಾದ ಮುತ್ತಿನ ಮೂಗುತಿ ನೀನು

ಎತ್ತಿತಂದೆ ಎಲ್ಲಿಂದ ರಾಯ ಮುತ್ತೆತ್ತ ರಾಯ||ಪ||


ಅತ್ತಾ ಸೀತಮ್ಮನ ಮುದ್ದು ಮೊಗದಲ್ಲಿ ಮತ್ತೆ

ನಗೆಯ ತಂದೆಯಾ ಮಹನೀಯಾ ಮಾರುತಿರಾಯ||ಅ.ಪ|| 


ಸೀತಮ್ಮ ಸ್ನಾನ ಮಾಡಿ, ಮೂಗುತಿಯ ಹುಡುಕಾಡಿ

ನಿನ್ನ ಕೂಗಿದಳೇನು ಹನುಮಂತ ರಾಯ

ನೀರಲ್ಲಿ ಬಾಲ ಬಿಟ್ಟು ನದಿಯನ್ನೆ ಶೋಧಿಸಿದೆ

ಎಂತ ಶ್ರದ್ಧೆಯೋ ಮಹನೀಯಾ, ಹನುಮಂತ ರಾಯ||೧||


ಅಮ್ಮಾ ಸೀತಮ್ಮನು ನಿನ್ನ ಭಕ್ತಿಗೆ ಮೆಚ್ಚಿ

ಮುತ್ತೆತ್ತೆರಾಯನೆಂದು ಹರಸಿದಳೇನು?

ನಿನ್ನಂತ ದಾಸನನು ಪಡೆದಾ ಶ್ರೀ ರಾಮನು ಎಂಥ

ಭಾಗ್ಯವಂಥನಯ್ಯ, ಹನುಮಂತ ರಾಯ||೨||


ನಿನ್ನಂತೆ ಭಕ್ತಿ ಇಲ್ಲ, ನಿನ್ನಂತೆ ಶಕ್ತಿ ಇಲ್ಲ

ಏನೂ ಇಲ್ಲದ ಜೀವ ನನ್ನದು ಸ್ವಾಮಿ

ನಿನ್ನೆ ನಾ ನಂಬಿ ಬಂದೆ ನೀನೆ ನನ್ನ ತಾಯಿ ತಂದೆ

ಕಾಪಾಡುವಾ ಹೊಣೆಯು ನಿನ್ನದು, ತಂದೆ ನಿನ್ನದು||೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು