|| ರಾಮ ಭಜನೆ ||
ರಾಗ - ಶಂಕರಾಭರಣ
ರಾಮರಕ್ಷಿಸು । ಪ್ರೇಮದಿಂದಲಿ ।
ಕಾಮಿತಾರ್ಥ ಫಲವನಿತ್ತು ಭೂಮಿಜಾಪತೇ ॥ಪ॥
ದಶರಥಸುತ । ದೇವದೇವನೆ ।
ಕುಶಿಕಯಜ್ಞರಕ್ಷಕ । ಸಲಹು ಎಮ್ಮನು ॥
ಸೋಮಸುಂದರ | ಶ್ಯಾಮಲಾಂಗನೆ |
ರಾಮಚಂದ್ರ ರಾಜನೆ । ಭೂಮಿಪಾಲಕ ॥
ಮೌನಿಮಾನಸ | ಕಾರುಣ್ಯಾಕರ |
ಮಾನನೀಯ ಚರಿತ ವೀರ । ಜಾನಕೀವರ ॥
ನತಜನಾದರ | ನೀರಜೇಕ್ಷಣ।
ಶತಮಖಾದಿ ವೀರವಂದ್ಯ | ಶಬರ ರಾಘವ ॥
ಅಹ ಇದೇನಿದು । ಆಶ್ಚರ್ಯವಾದುದು |
ರಾಮಚಂದ್ರ ನಿನ್ನ ದಯವು | ಬಾರದಿಹುದು ॥
ಬೇಡಬೇಡವೋ | ಬೇಟೆಯಾಟವು |
ಕಾಡ ತಿರುಗಿ ತಿರುಗಿ ಮೈ । ಬಾಡಿತಲ್ಲವೋ ॥
ಶರಣನಲ್ಲವೇ ನೀ । ಕರುಣಿಯಲ್ಲವೇ |
ಅರುಣ ಕಿರಣ ತರುಣ | ಶ್ರೀರಮಣನಲ್ಲವೇ॥
ಭಯನಿವಾರಣ । ಭಾಗ್ಯದಾಯಕ ।
ಕಾಮಿತಾರ್ಥ ಫಲವನಿತ್ತು । ರಕ್ಷಿಸು ರಾಮ ॥
0 ಕಾಮೆಂಟ್‌ಗಳು