ಸಾಷ್ಟಾಂಗ ಮಾರುತಿರಾಯ - Sashtanga Maruthi Raya

|| ಮಾರುತಿ ಭಜನೆ ||




ಸಾಷ್ಟಾಂಗ ಮಾರುತಿರಾಯ

ಹೇಳೊ ಎಲ್ಲಿ ರಾಮರಾಯ

ತೋರೋ ಎಲ್ಲಿ ರಘುವೀರ

ತೋರೋ ಎಲ್ಲಿ ರಘುವೀರ 


ಅಂಜನದೇವಿ ಕುಮಾರ

ಇರುವನು ಎಲ್ಲಿ ರಘುವೀರ

ಬೇಡಿಕೊಂಬೆ ದೇವಾ ನಿಮಗೆ

ರಾಮಪಾದ ತೊರೋ ಎಮಗೆ 


ಕಷ್ಟ ಬೇಕಾದಷ್ಟು ಬರಲಿ

ನಿನ್ನ ಕೃಪೆ ಮಾತ್ರ ಇರಲಿ

ರಾಮಪಾದ ತೋರೋ ಎನಗೆ

ನಿನ್ನದಯ ಇರಲಿ ಯಮಗೆ 


ಏನ್ನೋಳುಂಟು ಭೋಳೇ ಭಾವ

ಹೇಳಿ ಮಾಡಿಸಿಕೊಳ್ಳೋ ಸೇವ

ಕಾಮ ಕ್ರೋದಾದಿ ಗಳು ಬೇಡ

ಇನ್ನು ಆಗಗೋಡ ಬೇಡ 


ಆಸರೆ ನೀಡೋ ಹನುಮಂತ

ಎಂದಿಗೆ ಸಿಗುವನು ಸೀತಾಕಾಂತ

ಆಂಜನೇಯ ಅಂಜನಿ ತನಯ

ಅಂಜಿಗೆಯನ್ನು ಪರಿಹರಿಸಯ್ಯ 


ಮಾರುತಿ ರಾಯ ಬಲಭೀಮ

ಭಕ್ತರ ಕಂಡರೆ ಬಲು ಪ್ರೇಮ

ಬ್ರಹ್ಮಾನಂದ ಬಂಧ ಶರಣ

ಬಿಡಿಸೋ ಎನ್ನ ಜನನ ಮರಣ 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು