ವೇದವ ತಂದು ವಿಧಿಗೀವಂದೆ ನೀ - Vedava Thandu Vidhigeevande Nee

|| ಹರಿ ಸ್ತುತಿ ||




ವೇದವ ತಂದು ವಿಧಿಗೀವಂದೆ ನೀ

ಸಾಧು ಜನರ ಸಲಹಲಿ ಬಂದೆ ||pa||


ಮೋದದಿಂದೆಮ್ಮ ಮನದಿ ನಿಂದೆ ನೀ

ಬಾಧಿಪ ದುರಿತತತಿಯ ಕೊಂದೆ||a.pa||


ಸಕಲ ಸುರರಿಗೆ ಶಿರೋರನ್ನ ನೀ

ಅಕಳಂಕ ಆಶ್ರಿತ ಜನಮಾನ್ಯ

ನಿಖಿಲ ನಿಗಮನಿಕರದಿ ವರ್ಣ್ಯ ನೀ 

ಕರುಣಾಕಟಾಕ್ಷದಿ ನೋಡೆನ್ನ ||1||


ಕೈವಲ್ಯಪದವಿಯ ಕೊಡಬಲ್ಲ ನಿನ್ನ

ಸೇವಿಪ ಸುಜನರಿಗೆ ಎಣೆಯಿಲ್ಲ

ಭಾವಜಕೋಟಿಯಿಂದ ಅತಿ ಚೆಲ್ವ ನೀ

ಶ್ರೀವನಿತೆಗೆ ಸಿಲುಕುವನಲ್ಲ ||2||


ಹಯವದನ ಹೃದಯಸದನ

ಜಯ ಶಶಿವರ್ಣ ಜಗತಿಪೂರ್ಣ

ಭಯಹರ ಭಾಸುರ ಸಿರಿಚರಣನಿನ್ನ

ದಯಪಾತ್ರಾನು ಉದ್ಧರಿಸೆನ್ನ ||3||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು