ಪವಮಾನ ಸಂಜಾತ ಮಾರುತಿ - Pavamana Sanjata Maruti

 || ಮಾರುತಿ ಭಜನೆ ||



ಪವಮಾನ ಸಂಜಾತ ಮಾರುತಿ ।

ನಿನಗೆಣೆಯಾರೋ  ಈ ಜಗದಿ ಮಾರುತಿ ।।



ಅಂಜನೆ  ಉದರದಿ ಜನಿಸಿದೆ  

ಭವ ಭಂಜನ ನಾಮವ ಪಾಡಿದೆ |

ಅಂಜದೆ ಸಿಂಧುವ  ದಾಟಿದೆ  

ಮುದ್ರೆಯುಂಗುರ  ಸೀತೆಗೆ ನೀಡಿದೆ ।।೧।।


ಕುಂತಿ ಕುಮಾರ ಕಲಿ ಭೀಮನೇ 

ಮಹದಂತ ಸಮೀರ  ನಿಸ್ಸೀಮ್ಮನೇ ।

ನಂದ ಕಿಶೋರನ ಒಲಿಸಿದೆ  

ಮಹ ಸಂಧಾನ  ಕ್ರೌರ್ಯವ  ಸೀಳಿದೆ ।।೨।।


ವೇದಾಜ್ಞ  ವಿಪ್ರರ  ವರಸುತ  

ದಿವ್ಯ ವೇದಾಂತ  ಪೀಠದ ಯತಿವರ ।

ಗೋಪಿ ಚಂದನದೊಳು  ಅಡಗಿದ 

ಮುದ್ದು  ಗೋಪಾಲ ಕೃಷ್ಣನ ಪೂಜಿಪ ।।೩।।



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು