ನಿನ್ನ ನಾಮವಿದ್ದರೆ ಸಾಕೊ - Ninna Namaviddare Sako

|| ಶ್ರೀರಾಮ ಸ್ತುತಿ ||

ರಚನೆ : ಪುರಂದರದಾಸರು 
ರಾಗ-ಪಂತುವರಾಳಿ : 
ತಾಳ-ಅಟತಾಳ 



ನಿನ್ನ ನಾಮವಿದ್ದರೆ ಸಾಕೊ 

ಮುನಿದರೆ ಮುನಿ ನಿನ್ನಾಣೆ ಶ್ರೀರಾಮ 


ಹೊದ್ದಿದ ಪಾಪವನೆಲ್ಲ । ಛಿನ್ನ 

ಛಿದ್ರವ ಮಾಡಿ ಖಂಡಿಸಿ ಬಿಡುವ ||

ಎದ್ದರೆ ಸಂಗಡ ಬರುವ । ಎನ್ನ 

ಮುದ್ದಿಸಿ ಮುಂದಕೆ ಮುಕ್ತಿಯ ಕೊಡುವ ||೧||


ಸಾರೆ ಸಂಗಡ ಬರುವ । ಎನ್ನ 

ಸೇರಿದ ಪಾಪವ ಕೋಪದಿ ತರಿವ ||

ಝಾಡಿಸಿ ಕರ್ಮವ ಕಳೆವ । ಎನ್ನ 

ಕೂಡಿಕೊಂಡು ವೈಕುಂಠಕ್ಕೆ ನಡೆವ ||೨||


ಪರಮಾನಂದವವೀವ । 

ನಿನ್ನ ಸ್ಮರಣೆಯೆಂಬುದು ಎನ್ನ ಜೀವಕ್ಕೆ ಜೀವ 8 

ವರವ ಕೊಡುವುದೊಂದು ಭಾವ । ಈ 

ಪರಿ ಪುಸಿಯಲ್ಲ ಶ್ರೀ ಪುರಂದರ ವಿಠಲ ||೩||








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು