Rama Manoharane Dheera - ರಮಾ ಮನೋಹರನೆ ದೀನ

|| ಶ್ರೀರಾಮ ಸ್ತುತಿ ||

 ರಚನೆ : ಜಗನ್ನಾಥದಾಸರು 




ರಮಾ ಮನೋಹರನೆ ದೀನ ಪತಿತಪಾವನಾ ॥ಪ॥ 


ಚೆಂದದಿಂದ ವೇದ ತಂದ ಮಂದರೋದ್ಧರಾ 

ಅರವಿಂದನಯನ ಬಂದು ರಕ್ಷಿಸೊ ಇಂದು ಭೂಧರಾ ॥೧॥ 


ಕರುಳಮಾಲೆ ಧರಿಸಿದ ಶ್ರೀ ವರದ ವಾಮನಾ ಧೃತಕರದ 

ಪರಶುರಾಮ ರಾಘವ ಯದು ಕುಲೋತ್ತಮಾ ॥೨॥ 


ಲೋಕ ಮೋಹಕ ಬುದ್ಧನಾಗಿ ತೇಜಿಯೇರಿದಾ 

ಜಗದೇಕ ಜಗನ್ನಾಥ ವಿಠ್ಠಲ ಭೀಕರಾಂತಕಾ ॥೩॥ 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು