ಶ್ರೀಗೌರಿ ಶರ್ವಾಣಿ - Srigowri Sharwani

|| ಶ್ರೀಗೌರಿ ಹಾಡು ||




ಶ್ರೀಗೌರಿ ಶರ್ವಾಣಿ ಸರಸಿಜಾಂಬಕ ನೇತ್ರೆ | 

ನಾಗಭೂಷಣನ ಎಡಭಾಗದವಳೆ | 

ಯೋಗೀಶ ಮೊದಲಾದ ದೇವರ್ಕರೊಡೆಯಳೆ | 


ಬೇಗ ಪಾಲೀಸಮ್ಮ ಸಂತಾನ ಸಿರಿಯ | 

ಸೃಷ್ಟಿಯೊಳು ಭಜಿಸಿದಗೆ ಇಷ್ಟಾರ್ಥ ಕೊಡುವವಳೆ | 

ದುಷ್ಟ ಮರ್ಧನಳೆ ದಯಾಳುಶೀಲಳೆ | 

ಬೆಟ್ಟದಂಥಾ ದುರಿತ ದುರಿತಗಳ ನೀ ನೀಗಿ | 


ಕಟ್ಟು ಮಾಡಿ ಸಲಹೆ ಸಲಹೆಮ್ಮೊಳು | 

ನೀಲ ಕುಂತಳೆ ತೃಪ್ತಾತೃಪ್ತ ನಾನಾರೋಗ್ಯ | 

ಜ್ಞಾನಿಗಳರಸಿ ಕಾಣೆನೆ ಕಾಮಿನಿ | 

ಬಹಳ ಯೋಚನೆ ನಮಗೆ ಬಹು ಪರಾಕ್ರಮ ನಿಮಗೆ | 


ಸಾಲ ಶೂಲಗಳಿಲ್ಲದಂತೆ ಮಾಡೆ | 

ಮತ್ತ ಗಜಗಮನೆ ಮತ್ಸ್ಯ ಕುಚತಾಂಬಕೆ | 

ಮನದ ಗೌರಿ ಮುತ್ತೈದೆ ತನಗಳನು | 

ಮುತ್ತೈದೆ ತನಗಳನು ಕೊಡು ಕಂಡ್ಯ ಕೃಪೆಯಿಂದ | 

ವತ್ತರಿಸಿ ವೈರಿಗಳ ಕೊಡು ಸಂತತಿಯನು | 


ಅಳಿಯ ಕೊಳಗಾದ ಶ್ರೀ ಕಾಶಿ ವಿಶ್ವೇಶ್ವರನ। 

ಮಡದಿಗಾರತಿಯನೆತ್ತಿ ಮನುಜರೆಲ್ಲ ॥ 

ಥಳಥಳಿಪ ಪಾಂಚಾಲ ಗಿರಿಯಲ್ಲಿ ಶಿವನ। 

ವಡ್ಡೋಲಗ ಬೇಡುವಂತೆ ಇರುತಿಪ್ಪಳೆ ॥ 

ಪರಮೇಶ್ವರನ ರಾಣಿ ಮಂಗಳಾಗೌರಮ್ಮ | 


ತಾ ಮಾಡದೆ ಜಾಣತನದಿಂ ತವರು ಮನೆಗೆ। 

ಜಾಣತನದಿಂ ತವರು ಮನೆಗೆ ಬಂದೇನೆಂದು | 

ಜ್ಞಾನಿಗಳನ್ನು ಸಲಹುತಿದ್ದಳು | 

ಜಯತು ಭವಾನಿಗೆ ಜಯತು ಕಲ್ಯಾಣಿಗೆ | 

ಜಯಜಯತು ಸರ್ವ ಗುಣ ಸಂಪನ್ನೆಗೆ | 


ಜಯ ಮೂರು ಲೋಕಕ್ಕೆ ಬೇಡಿದ್ದರಗಳ ಕೊಡುವ | 

ಪಾರ್ವತೀ ಪರಮೇಶ್ವರಗೆ ಮಂಗಳಂ | 

ಜಯ ಮಂಗಳಂ ನಿತ್ಯ ಶುಭ ಮಂಗಳಂ | 

ಜಯ ಮಂಗಳಂ ನಿತ್ಯ ಶುಭ ಮಂಗಳಂ | 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು