ಮುದ್ದು ರಾಮರ ಬಂಟ - Muddu Ramara Bhanta

|| ಹನುಮ ಸ್ತುತಿ ||



ಮುದ್ದು ರಾಮರ ಬಂಟ ಬುದ್ಧಿವುಳ್ಳ ಹನುಮಂತ 

ಹದ್ದಾಗಿ ಸಾರಿದ್ದಾನೆ ಆಕಾಶಕೆ 


ನಿದ್ರೆ ಗೈವ ಸಮಯದಲಿ ಎದ್ದು ಬಾರೆಂದರೆ 

ಅಲ್ಲಿದ್ದ ರಕ್ಕಸರನೆಲ್ಲಾ ಗೆಲಿದಾತನೆ ||೧||


ದಾರಿ ದೂರವೆಂದು ದಾರಿಯನೆ ನಿರ್ಮಿಸಿದ 

ಧೀರ ರಾಮರ ಬಂಟ ಹನುಮಂತನೆ 

ನೋಡಿಬಾರೆಂದರೆ ಪೋಗಿ ಲಂಕೆಯ ಸುಟ್ಟು 

ಬೇಗದಲಿ ಮರನೇರಿ ಕೊಂಡಾತನೆ ||೨||


ಆತನ ಮಾತಿಗೆ ಸೇತುವೆಯ ಕಟ್ಟಿಸಿದ 

ಸೀತಾರಾಮರ ಬಂಟ ಹನುಮಂತನೆ 

ಸೀತಾ ದೇವಮ್ಮನಿಗೆ ಪ್ರೀತಿಯ ಬಂಟನಾದ 

ಮುಖ್ಯಪ್ರಾಣ ಹಯವದನನ ದೂತನೆ ||೩||



 ಹಾಡಿನ ದಾಟಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ 

https://www.facebook.com/61551915788428/videos/1832739350565209/?mibextid=5N0WYUVeg6tIdfMR



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು