ಅಂಬಾ ಶಿವೆ ಶಂಕರಿ - Amba Shive Shankari

|| ಅಂಬಾ ಸ್ತುತಿ ||



ಅಂಬಾ ಶಿವೆ ಶಂಕರಿ ಜಗದಂಬಾ ಪರಮೇಶ್ವರಿ

ಅಂಬಾ ಮೂಕಾಂಬ ಹೇರಂಬಾ ಜನನಿ

ಸೂರ್ಯ ಬಿಂಬೆ ಸೌರಂಬೆ ನಾ ನಂಬಿ ಬಂದಿಹೆ ತಾಯೆ

||ಪ||


ಗೌರಿ ಹರಿಸೋದರಿ ಭಯದೂರಿ ಕರುಣಾಕರಿ

ಧೀರೆ ಓಂಕಾರೆ ವಿಸ್ತಾರೆ ಮುಂದಿನ ದಾರಿ

ತೋರೆ ಉದಾರೆ ಗಂಭೀರೆ ವಂದಿಪೆ ತಾಯೆ||೧||


ಶಾಂತಿ ಜಯಾ ಭಾರತಿ

ಗುಣವಂತೆ ನಿನಗಾರತಿ

ಸಂತತ ನಿಂತಿರೆ ಎನ್ನಂತರಂಗದಿ

ನಿಶ್ಚಿಂತೆ ವೇದಾಂತೆ ಗುಣವಂತೆ ಶಾರದಾಮಾತೆ||೨||


ದಾಸಾತ್ಮಕೆ ಶಾಂಭವಿ

ವರ ಪಾಶಾಂತಕೆ ಭೈರವಿ

ವಾಸ ಕೈಲಾಸಗಿರೀಶನಾಗಿರುತಿರ್ಪ

ಈಶ ಸರ್ವೇಶ ಮಹೇಶನ ಪ್ರಿಯದರಸಿ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು