ಮುತ್ತಿನುಂಗುರ ರಾಮ ಕೊಟ್ಟ ಹನುಮಗೆ - Muttinungura Rama Kotta Hanumage

|| ಹನುಮ ಸ್ತುತಿ ||




ಮುತ್ತಿನುಂಗುರ ರಾಮ ಕೊಟ್ಟ ಹನುಮಗೆ | 

ಮಿತ್ರ ನೋಡಿ ಬಾ ಎಂದು ಉತ್ತರ ಹೇಳಿದ ॥ 


ಏಳು ಶರಧಿಯ ಹನುಮ ಹೇಗೆ ದಾಟಿದ | 

ಪೋಗಿ ಲಂಕೆಯ ಪುರವ ಹೇಗೆ ತಲುಪಿದ ॥ 


ಊರ ಹೊಕ್ಕನು ಕೇರಿ ಕೇರಿ ಮನೆಗಳ | 

ದಾರಿ ಕಾಣದೆ ಹನುಮ ಗಾಬರಿಗೊಂಡನು ॥ 


ಅಶೋಕ ವನದೊಳು ಸಾಧ್ವಿ ಸೀತಾದೇವಿಯು | 

ದೂತ ಹನುಮನ ಕಂಡು ಭೀತಿಗೊಂಡಳು ॥ 


ಅಂಜಬೇಡವೆ ತಾಯಿ ಅಂಜನ ಕುವರನು | 

ಎಂದು ರಾಮನ ಮುದ್ರೆಯ ತಂದು ಕೊಟ್ಟನು || 


ಬಾಲ ಸುತ್ತಿದ ಬಲದ ಹಸ್ತ ಎತ್ತಿದ | 

ಬಾಳೆ ಗೊನೆಗಳ ಕಿತ್ತು ಧೂಳಿ ಮಾಡಿದ ॥ 


ಎನ್ನ ಕರುಣಿಸು ಸ್ವಾಮಿ ಎಂದು ಬೇಡಿದ | 

ಎಂದು ಹೇಳುತ ರಾಮನ ಪಾದಕೆರಗಿದ ||






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು