|| ಶ್ರೀರಾಮ ಸ್ತುತಿ ||
ಅನಾದಿ ರಾಮ , ಅನಂತ ರಾಮ
ಗುಣನಿಧಿ ಸಾರ, ರಘುಕುಲ ಸೋಮ
ಸೀತಾ ರಾಮ , ಅಭಯದ ಶ್ಯಾಮ
ವಿನಯ ವಿದೂರ, ಬಲದಿನಿಸ್ಸೀಮ
ರಾಮ ರಾಮ ಶ್ರೀ ರಘು ರಾಮ,
ಜಾನಕಿ ವಲ್ಲಭ ಜೈ ಜೈ ರಾಮ
ದೀನ ಬಂದು, ಬವ ಭಯ ಸಂಹಾರ
ಆತ್ಮ ಜ್ಞಾನ , ನಗು ಮುಖ ಚಹರ
ಕೋದಂಡ ದಾರಿ, ರಘುಕುಲ ವೀರ
ಅಯೋದ್ಯದಿಪತಿ, ಪುನರ್ವಸು ತಾರ
ರಾಮ ರಾಮ ಶ್ರೀ ರಘು ರಾಮ ,
ಜಗದೋದ್ದರಕ ಶ್ರೀ ರಾಮ
ಗಿರಿ ಧರೆಯಲ್ಲೂ, ನಿನ್ನದೇ ನಾಮ
ಸತ್ಯ ಸಿಂಚನ, ಸುಂದರ ಚಾಮ
ಸರ್ವ ಜ್ಞಾನ, ಸಮಾಲೋಚನ ಪರಮ
ಸುಗುಣ ಸುಲೋಚನ, ಕೌಸಲ್ಯೆ ರಾಮ
ರಾಮ ರಾಮ ಶ್ರೀ ರಘು ರಾಮ,
ಮಾತ ಕುವರ ರಘು ರಾಮ
ಶಬರಿ ಪ್ರೀತ, ಮುಕ್ತಿ ಪ್ರದಾತ
ಪಿತೃ ವಾಕ್ಯ, ಪರಿಪಾಲನ ಸುತನೀತ
ಏಕ ನಡೆ, ಗಾಂಭೀರ್ಯ ಸಹಿತ
ರಾಜರ ರಾಜ , ಸಕಲ ಪಂಡಿತ
ರಾಮ ರಾಮ ಶ್ರೀ ರಘು ರಾಮ,
ಜಯ ಜಗದೊಡೆಯ ರಘು ರಾಮ
ಹನುಮನ ಪ್ರಾಣ, ನಿಜಗುಣ ಧಾಮ
ಅದಾರ ಮತಿ ಗಣ, ತನುಮನ ಪ್ರೇಮ
ಆಧಾರ ಚರಣ, ಅನುಗ್ರಹ ನಾಮ
ಪಾಪವೇ ಹರಣ , ಎಂದರೆ ರಾಮ
ರಾಮ ರಾಮ ಶ್ರೀ ರಘು ರಾಮ,
ಕರುಣಾ ಸಾಗರ ಶ್ರೀರಾಮ

0 ಕಾಮೆಂಟ್‌ಗಳು