ರಾಮ ಬಂದನೇನೆ|ಶ್ರೀ ರಘು ರಾಮ ಬಂದನೇನೆ||ಪ||
ಪ್ರೇಮಿಕ ಜನರನು ಹೊರೆಯಲಾಗಿ|ಶ್ರೀರಘು||ಅ. ಪ||
ಜಾನಕಿ ಸಹಿತ ಲಕ್ಷಣರೊಡಗೂಡಿ |
ಸ್ವಾನಂದದಿ ದಿಗ್ವಿಜಯಮಾಡಿ || 1 ||
ಈರೇಳು ವರುಷಕೆ ಬರುವೆನೆಂದು ಮುನ್ನ |
ಸಾರಿದ ನುಡಿ ಸತ್ಯಮಾಡಿ ದೋರಲು || 2 ||
ಹಾರೈಸಿ ನೋಡಲು ಕಣ್ಣಿಗೆ ಹಬ್ಬ |
ದೋರಲು ಮೋಹದ ಮುದ್ದು ಮೊಗದಾ || 3 ||
ಅವಧಿಯ ಮೀರಲು ಅಸುವ ತೊರೆವೆಸಿಂದು |
ತವಕದಿ ಭರತನ ಪಾಲಿಸಲಿಕ್ಕೆ || 4 ||
ಸಾಕೇತ ಪುರಪತಿ ಸಾಮ್ರಾಜ್ಯಲೋಲನಾಗಿ |
ಸಾಕುವ ಜಗಗುರು ಮಹೀಪತಿ ಪ್ರಭು || 5 ||
0 ಕಾಮೆಂಟ್ಗಳು