ಬಿಂದು ಮಾಧವ ನಮ್ಮ ಕಾಯುವ - Bindu Madhava Namma Kayuva

|| ಬಿಂದು ಮಾಧವ ಸ್ತುತಿ ||

ಸಾಹಿತ್ಯ ಸಂಗೀತ ಗಾಯನ: ವಿದ್ವಾನ್ ಶ್ರೀ ಹರೀಶ್ ಪಾಂಡವ್ ಮೈಸೂರು 


ಬಿಂದು ಮಾಧವ ನಮ್ಮ ಕಾಯುವ ||ಪ||


ಅವರ ನಾಮ ಸ್ಮರಣೆ ನಾವು ನಿತ್ಯ ಮಾಡುವ 

ಶಕ್ತಿಯಾಗಿ ನಮ್ಮ ಹಿಂದೆ ತಾನೆ ನಿಲ್ಲುವ 

ದಾರಿ ದೀಪವಾಗಿ ನಮ್ಮ ಬಾಳ ಬೆಳಗುವ

ಮುನ್ನಡೆಸಿ ಹರಸುವ ಕೈಹಿಡಿದು ನಡೆಸುವ ||೧||


ಮಾರುತಿಯ ರೂಪದಲಿ ಬೆಲಗೂರಲಿ ನಿಂದೆ 

ಕಷ್ಟವೆಂದು ಬೇಡಿದವರ ಬಳಿಗೆ ಓಡಿ ಬಂದೆ 

ಸರ್ವವ್ಯಾಪಕ ನೀನು ನಿತ್ಯ ಸತ್ಯ ತಂದೆ 

ಅರಸಿ ಬಂದ ಭಕುತರ ಪೊರೆದು ಕಾಯೊ ಮುಂದೆ||೨||


ನಾದ ಗಾನ ಲೋಲನು ತಾ ಹಾಡಿ ಭಜಿಸೆ ಒಲಿಯುವನು  

ಶ್ರೀ ರಾಮ್ ಜೈ ರಾಮ್ ಹಾಡಿದೆಂದು ಹೇಳಿ ಪಾಪ ಕಳೆಯುವನು 

ನರ ರೂಪದ ಭುವಿಗೆ ಬಂದ ಹನುಮ ನೀನೆ ಗುರುವೇ

ಜಗವನುದ್ಧರಿಸಲೆಂದು ಧರೆಗೆ ಇಳಿದ ಪ್ರಭುವೇ ||೩||









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು