|| ಕೃಷ್ಣ ಭಜನೆ ||
ಮಕ್ಕಳ ಮಾಣಿಕವೆ ಮನೋಹರ ನಿಧಿಯೇ | ವೈರಿ |
ರಕ್ಕಸ ಶಕಟನ ತುಳಿ ದುದೀ ಪಾದವೇ ॥ಪ॥
ಬಲಿಯ ದಾನವಬೇಡಿ ನೆಲದೆ ಈರಡಿ ಮಾಡಿ |
ಜಲಧಿಯ ಪಡೆದ ಪಾದವೇ ಕೃಷ್ಣ॥
ಹಲವು ಕಾಲಗಳಿಂದ ಶಿಲೆಪಾಪ ಪಡೆದಿರಲು |
ಫಲ ಕಾಲಕ್ಕೊದಗಿದ್ದುದೀ ಪಾದವೇ ಕೃಷ್ಣ ।।೧।।
ಕಡುಕೋಪ ದಿಂದ ಕಾಳಿಂಗನ ಮಡವ ಕಲುಕಿ | '
ಹೆಡೆಯನ್ನು ತುಳಿದದ್ದೀ ಪಾದವೇ ಕೃಷ್ಣ ॥
ಸಡಗರದಿ ಕೌರವನ ಸಿಂಹಾಸನವದು !
ಹೊಡೆ ಮುಗುಚಿ ಕೆಡಹಿದ್ದೀ ಪಾದವೇ ಕೃಷ್ಣ||೨||
ಶ್ರೀಂಗಾರದಿಂದಾರು ಹೆಂಗಳ ಸಹಿತ ಶ್ರೀ |
ಅಂಗನೆಯೊತ್ತುವುದೀ ಪಾದವೇ ಕೃಷ್ಣ ॥
ಸಂಗ ಸುಖದಿ ಶ್ರೀ ಪುರಂದರ ವಿಠಲನೆ |
ಅಂಗದೊಳ ಗಡಗಿದುದ್ದೀ ಪಾದವೇ ಕೃಷ್ಣ ।।೩।।
0 ಕಾಮೆಂಟ್‌ಗಳು