|| ಗುರು ಸ್ತುತಿ ||
ರಚನೆ : ಅಂಬಾಸುತ
ಕರುಣಿಸಿದಾ ಗುರುನಾಥ.... ಕರುಣಿಸಿದಾ ಗುರುನಾಥ
ಕರುಣಿಸು ಎಂದು ಹನಿ ಕಣ್ಣಿರಿಡಲೂ....||ಪ||
ಕನವರಿಸಲು ನಾ ಕನಸಿನೊಳು ಬಂದು
ಕಂದ ಎಂದು ಎನ್ನ ಕುಂದುಗಳ ಮರೆತು....||ಅ.ಪ||
ತಾಳ ಮೇಳವು ಗುರು ಮನೆಯಾ ಮುಂದೆ
ಲೆಕ್ಕವಿಲ್ಲದ ಭಕುತರು ಅವನಾ ಹಿಂದೆ
ಗುರು ಹರಿ ಗುರು ಹರ ಗುರು ಬ್ರಹ್ಮ ಎಂದೆ
ಮೈಮರೆತು ಕುಣಿದು ಭಜಿಸಿರಲು ನಾಮವು ಒಂದೆ...||೧||
ದೂರದೊಳಿರುವ ನಾ ದೂರವೇ ನಿನಗೆಂದು
ಎನ್ನತ್ತ ನೀ ನೊಡಬಾರದೆ ಗುರುವೇ ಎಂದು
ಆ ಭಕುತರ ಪುಣ್ಯಕ್ಕೆ ಎಣೆ ಇಲ್ಲ ಎನಗೇನು
ಪರಮ ಪಾಪಿಯು ನಿನ್ನ ದೃಷ್ಠಿಗಗೋಚರನೂ...||೨||
ಎನುತಾ ಕಣ್ಣೀರ ಹಾಕಿ ಕೈ ಮುಗಿದು ನಿಂತಿರೆ
ಆ ಕ್ಷಣವೇ ಪ್ರತ್ಯಕ್ಷ ಕರುಣಿ ನೀನೆನ್ನ ಮುಂದೆ...
ವರ ಪ್ರಸಾದವ ಎನ್ನ ಕೈಗಿತ್ತ ವರಗುರು...
ಅಂಬಾಸುತನೆ ನಾನಿಹೆ ಕಾಯುವೆನು ಎಂದು...||೩||
0 ಕಾಮೆಂಟ್‌ಗಳು