|| ದೇವಿ ಸ್ತುತಿ ||
ನಮ್ಮಮ್ಮ ಕೊಲ್ಲೂರ ಮೂಕಾಂಬಿಕೆ||2||
ಒಮ್ಮೆ ಕೈಗೊಳ್ಳೆ ದೇವಿ ನಮ್ಮ ಹರಕೆ
||ನಮ್ಮಮ್ಮ||
ನೋಡಮ್ಮ ದಯದಿಂದ ನಿನ್ನ ಮಕ್ಕಳು ನಾವು
ಈಡಿಲ್ಲದ ಭಾಗ್ಯ ಕೊಡ ಮಾಡೆ
||ನೋಡಮ್ಮ||
ಮಾಡಮ್ಮ ಧನಕನಕ ಧಾರೆ ಬಾರೆ||2||
ನೀಡಮ್ಮ ಮನಕೆ ಸಂತೋಷ ಧಾರೆ
||ನಮ್ಮಮ್ಮ||
ಭ್ರುಗು ಮುನಿ ಒದೆಯಳು
ದುಗುಡದಿಂದ ಹರಿನಗರಿಯ ತೊರೆದೆ ಏಕಮ್ಮ
||ಭ್ರುಗು||
ನಗಧರ ಹರಿಯ ನಗುಮೊಗದ ಅರಸಿಯೆ||2||
ಹುಸಿ ಮುನಿಸಿನಿಂದ ಏಕೆ ಬಂದ್ಯಮ್ಮ
||ನಮ್ಮಮ್ಮ||
ಜರತಾರಿ ಪೀತಾಂಬರವ ಉಟ್ಟು
ಅರಸಿನ ಕುಂಕುಮ ಬಳೆಯ ತೊಟ್ಟು
||ಜರತಾರಿ||
ಅರಳು ಮಲ್ಲಿಗೆ ಮುಡಿದು
ಕರುಣಸಾಗರೆ ಕಮಲೆ||ಅರಳು||
ವರ ನೀಡೆ ನಮಗಾಗಿ ಬಂದೆ ವರದೆ
||ನಮ್ಮಮ್ಮ||
0 ಕಾಮೆಂಟ್ಗಳು