|| ಮಾರುತಿ ಸ್ತುತಿ ||
ಎಲ್ಲಿರುವೆ ತಂದೆ ಬಾರೋ
ಹೇ ಮಾರುತಿ....
ಎಲ್ಲಿರುವೆ ತಂದೆ ಬಾರೋ....
ಎಲ್ಲೆಲ್ಲಿ ನೋಡಿದರು ಅಲ್ಲಿ ನಿನ್ನ ಕೀರುತಿ||2||
ಅಲ್ಲಲ್ಲಿ ನೀನಿರುತೀ ಮಾರುತಿ||2||
||ಎಲ್ಲಿರುವೆ||
ಅಂದು ರಘುನಂದನಗೆ
ವಂದಿಸುತ ಇಂದಿರೆಯ ||ಅಂದು||
ಕಂಡು ಕೊಂಡಾಡಿದೆಲೋ ಮಾರುತಿ||2||
||ಎಲ್ಲಿರುವೆ||
ರಂಗನ ಅರ್ಧಾಂಗಿಗೆ ನೀ
ಉಂಗುರವನಿತ್ತು ||ರಂಗನ||
ವನಭಂಗವಗೈದೆಯಲ್ಲೋ||2||
||ಎಲ್ಲಿರುವೆ||
ಶೇಷಗಿರಿವಾಸಗೆ ನೀ ದಾಸನೆಂದು
ನಂಬಿದ ಈ ||ಶೇಷ||
ದಾಸಗೆ ದಯ ಮಾಡೋ ಮಾರುತಿ||2||
||ಎಲ್ಲಿರುವೆ||
0 ಕಾಮೆಂಟ್‌ಗಳು