|| ನಾರಾಯಣ ಸ್ತುತಿ ||
ನಿನ್ನ ನಾಮವೆ ಎನಗೆ
ಅಮೃತಾನ್ನವು ||ನಿನ್ನ||
ಇನ್ನು ಹಸಿದಿರಲೇಕೆ ನೀನೊಲಿದಿರಲು
||ನಿನ್ನ||
ಕೇಶವನೆಂಬ ನಾಮ ಕರಿದ
ಹೂರಣಕಡುಬು
ವಾಸುದೇವನ ನಾಮ
ವಡೆ ಶ್ಯಾವಿಗೆ
ಸಾಸಿರವೆಂಬ ನಾಮ ಶ್ಯಾವಿಗೆ ಪರಮಾನ್ನ
ದೋಷದೂರನ ನಾಮ
ಸೂಸಲ ಕಡುಬು ||ಸಾಸಿರ||
||ನಿನ್ನ||
ನಾರಾಯಣನ ನಿನ್ನ
ನಾಮ ನೊರೆಹಾಲು ಸಕ್ಕರೆ
ಶ್ರೀರಾಮ ನಾಮ ಸರವಳಿ ಸಜ್ಜಿಗೆ
ಕಾರುಣ್ಯನಿಧಿ ನಾಮ
ಕರಿದ ಹಪ್ಪಳ ಸಂಡಿಗೆ
ನಾರಾಯಣನ ನಾಮ ಪರಿಪರಿಯ
ಪರಮಾನ್ನ ||ಕಾರುಣ||
||ನಿನ್ನ ||
ಈ ಪರಿಯ ನಾಮಾವಳಿಯನು
ನೆರೆ ಸವಿದುಂಬೆ
ಆಪತ್ತು ಬಿಡಿಸೆನ್ನ ಕ್ಷುಧೆಯ ನೂಕಿ
ಗೋಪಾಲ ಉರಗಾದ್ರಿ ಪುರಂದರವಿಠಲನೆ
ಶ್ರೀಪಾದ ನಂಬಿ ಅಪವರ್ಗ ಸೇರುವ||ಗೋಪಾಲ||
||ನಿನ್ನ||
0 ಕಾಮೆಂಟ್‌ಗಳು