|| ಶ್ರೀರಾಮ ಸ್ತುತಿ ||
ಇಕ್ಕೋ ನೋಡು ರಾಮ ನಿಧಿ ಎದುರಿಗಿರುತಿರೆ
ಹೃದಯವೆಂಬ ಸದನದಲ್ಲಿ ಕದವ ತೆರೆದಿದೆ |
ದಾರಿಯಲ್ಲಿ ಆರು ಛತ್ರ ಭೂರಿ ಭೋಜನ
ಊರೂೊಳಲ್ಲಿ ಪ್ರಣವ ಶಬ್ದ ಭೋರುಗುಟ್ಟಿದೆ
ನೂರು ಕೋಟಿ ಸೂರ್ಯ ಕಿರಣ ತೋರುವ ಪ್ರಭೆ
ಸೂರೆ ಮಾಡಿ ಕೊಳ್ಳಿರೋ ಪಾರ ವಿಲ್ಲದೆ ॥೧॥
ಅಷ್ಟ ದಳದ ಮಂಟಪದ ಪೆಟ್ಟಿಗೆಯಲ್ಲಿ
ಸೃಷ್ಟಿಗೊಡೆಯ ಹರಿಯ ನಾಮಅಂಕಿತವಾದ
ಕಟ್ಟಳೆ ಇಲ್ಲದ ನಾಣ್ಯಗಳ ಕಟ್ಟಿ ಇರಿಸಿದ
ಹುಟ್ಟು ತಿರುಕರೆಲ್ಲ ಬಂದು ಕಟ್ಟಿಕೊಳ್ಳಿರೋ ॥|೨॥
ಅಂಕೆ ಮಾಡುವರಿಲ್ಲ ಇದಕೆ ಶಂಕೆ ಬ್ಯಾಡಿರೋ
ಅಹಂಕೃತಿಯ ಮರೆತು ಕಾಲಿಗೆ ಗೆಜ್ಜೆ ಕಟ್ಟಿರೋ
ಶಂಖ ಶಬ್ದ ನಾದಗಳ ರುನ್ ಕೃತಿಯಿಂದ
ವೆಂಕಟಚಲ ಕಾಯ್ವ ವಿಜಯ ವಿಠ್ಠಲ |೩|

0 ಕಾಮೆಂಟ್‌ಗಳು