ರಾಮ ರಾಮ ಜಯ ರಾಮ - Rama Rama Jaya Rama

|| ಶ್ರೀರಾಮ ಸ್ತುತಿ ||




ರಾಮ ರಾಮ ಜಯ ರಾಮ ಜಯ ರಾಮ ರಘುರಾಮ 

ಜಯ ರಾಮ ರಘು ರಾಮ।|ಪ||


ರಾಮ ರಾಮ ರಘುನಂದನ ತೋಷಣ 

ಅಮಿಷ ಪದಾಂಬುಜ ಪಾವನ 

ನಾಮ ವಿಮಲ ಕಮಲಾಯತ ಲೋಚನ 

ಭೂಮಿಜಾರಮಣ ಸದಾ ಶುಭಮಹಿಮನೆ ।೧॥ 


ದಂಡ ಕುಖರ ಹರ ವಂದಿತ ಸುಜಟಾ 

ಮಂಡಿತ ಮೌಳಿ ಮುನೀಂದ್ರ ಕರಾರ್ಚಿತ 

ಚಂಡಕುಲೇಶ ಖಳ ನಿಶಾಚರ 

ದಂಡನ ವರಕೋದಂಡ ವಿದಾರಿ ॥|೨|। 


ವಾರಿದ ಶಾಮ ದಯಾಂಬುಧಿ ಭಕ್ತ ಸ 

ಮೀರಜ ಸೇವ್ಯ ವಿಭೀಷಣ ವರದ ಸು 

ಸ್ಮೇರವದನ ಸಾಮ್ರಾಜ್ಯ ಪರಾಯಣ 

ಭೂರಿ ಪ್ರಸನ್ತೆಂಕಟ ಕೃಷ್ಣತೇ ನಮೋ ||೩||








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು