|| ಶ್ರೀರಾಮ ಸ್ತುತಿ ||
ಕರೆದರೆ ಧ್ವನಿ ಕೇಳದೆ ರಘು ರಾಮಚಂದ್ರ
ಮರುಕವಾಗದೆ ನಿನಗೆ ||ಪ||
ಮರುತನಂದದಿ ನಿನ್ನ ಪೂಜಿಸಲರಿಯನು
ಭರತನಂದದಿ ನಿನ್ನ ಸೇವಿಸಲರಿಯನು||ಅ.ಪ||
ದುರುಳ ರಕ್ಕಸನು ತನ್ನ ಶಿಶುವನ್ನು ಪಿಡಿದು
ತೋರೋ ಶ್ರೀಹರಿ ಎನಲು
ತರಳ ಪ್ರಹ್ಲಾದನ ಕರುಣ ವಾಕ್ಯವ ಕೇಳಿ
ತ್ವರಿತದಿ ಕಂಭದಿಂ ತೋರಲಿಲ್ಲವೇ ದೇವ||೧||
ನೆಗಳಿ ಬಾಯಿಗೆ ಸಿಲುಕಿದ ಕರಿರಾಜನು
ಪೊರೆಯೋ ಶ್ರೀಹರಿ ಎನಲು
ಕಾರಿಯಮೊರೆಯ ಕೇಳಿ ತ್ವರಿತದಿಂದಲಿ ಬಂದು
ಕಾರಿಯನುದ್ದರಿಸಿದ ಕರಿರಾಜ ವರದನೆ||೨||
ವಾಮನ ಮೂರುತಿಯೇ ಬಲಿರಾಜನ
ಯಾಗ ಮಂಟಪಕೆ ಪೋಗಿ
ಮೂರು ಪಾದದಷ್ಟು ಭೂಮಿ ದಾನವ ಬೇಡಿ
ಬಲಿಯ ನೆಲಕೆ ತುಳಿದ ರಘುರಾಮ ವಿಠ್ಠಲ ||೩||

0 ಕಾಮೆಂಟ್ಗಳು