|| ಶಿವ ಸ್ತುತಿ ||
ಇದೋ ಶಿವ ಬಂದ ನೋಡಿ ಇದೋ ಶಿವ ಬಂದ
ವೇದಾಂತ ವೇದದ ಯೋದದಿ ಬಂದ ||ಪ||
ಇಂದು ಧರನು ಬಂದ ಕಂದುಗೊರಳ ಬಂದ
ನಂದಿ ವಾಹನ ಚಿದಾನಂದನು ಬಂದ ||೧||
ಶಂಭು ಶಂಕರ ಬಂದ ಜಂಭಾರಿಸುತ ಬಂದ
ಅಂಬಿಕಾರಮಣ ತ್ರಯಂಬಕ ಬಂದ ||೨||
ಕಂತು ಹರನು ಬಂದ ಅಂತರಾತ್ಮನು ಬಂದ
ಚಿಂತಿತಾರ್ಥಿವ ತ್ರಿಪುರಾಂತಕ ಬಂದ ||೩||
ಗಂಗಾಧರನು ಬಂದ ಮಂಗಳಾಂಗನು ಬಂದ
ಸಂಗರಹಿತ ಮಹಲಿಂಗನು ಬಂದ ||೪||
ಉರಗ ಭೂಷಣ ಬಂದ ಸುರರ ಪೋಷಣ ಬಂದ
ಗುರು ಮಹಿಪತಿ ಪ್ರಭು ಕರುಣದಿ ಬಂದ ||೫||

0 ಕಾಮೆಂಟ್‌ಗಳು