|| ವೆಂಕಟರಮಣ ಸ್ತುತಿ ||
ರಚನೆ : ಸಂತ ಭದ್ರಗಿರಿ ಕೇಶವ ದಾಸರು
ಅಗಣಿತ ಗುಣಗಣ ವೆಂಕಟ ರಮಣ
ಪದ್ಮಾವತಿ ಪತಿ ಶ್ರೀನಿವಾಸ
ಅಗಧರ ಭೂಧರ ಶ್ರೀವರ ಶ್ರೀಕರ
ಖಗ ವಾಹನ ಹರಿ ಶ್ರೀನಿವಾಸ
ಶಂಖ ಚಕ್ರದರ ವೆಂಕಟರಮಣ
ಪಂಕಜ ಲೋಚನ ಶ್ರೀನಿವಾಸ
ಕುಂಕುಮ ಚಂದನ ಚರ್ಚಿತ ಪದಯುಗ
ಅಂಕ ಲಕ್ಷ್ಮೀ ಧರ ಶ್ರೀನಿವಾಸ
ಕಲಿಯುಗ ವರದ ಕಲ್ಯಾಣ ನಿಲಯ
ಕಲಿ ಮಲ ನಾಶಕ ಶ್ರೀನಿವಾಸ
ನಳಿನ ಲೋಚನ ದಾಸ ಕೇಶವನುತ
ಜಲಜನಾಭ ಹರಿ ಶ್ರೀನಿವಾಸ
0 ಕಾಮೆಂಟ್ಗಳು