|| ಹನುಮ ಸ್ತುತಿ ||
ಶರಣು ರಾಮ ಭಕ್ತ ಹನುಮ
ವರ ವಿಧಾತ ಪೂರ್ಣ ಪ್ರೇಮ ॥ಪ॥
ಶಂಕರಾವತಾರ ವೀರ
ರಾಮ ದೂತ ಮಹಾ ಶೂರ ||ಅ.ಪ||
ವಾಯು ಪುತ್ರ ಕಪಿಯ ರಾಜ
ವಜ್ರಕಾಯ ದಿವ್ಯ ತೇಜ
ಕೇಸರಿಯಾ ಸುತನು ಎನಿಸಿ
ಕ್ಲೇಶ ನಾಶ ಪಡಿಸುವಾತ ॥ ೧॥
ಮಹಾ ಚತುರ ರಾಮ ಬಂಟ
ಸೂಕ್ಷ್ಮತನದಿ ಸೀತೆ ಕಂಡ
ಲೀಲೆಯಿಂದ ಲಂಕೆ ಉರಿಸಿ
ಅಸುರರರಾ ಸಂಹರಿಸಿದಾತ ||೨॥
ರಾಮ ನಾಮ ರಸಾಯನದಿ
ರಘುಪತಿಯ ದಾಸನಾದ
ಜ್ಞಾನಗುಣ ಸಂಪನ್ನನೆನಿಸಿ
ಜಗದ್ವಿಖ್ಯಾತಿ ಪಡೆದನೀತ ॥೩।|
0 ಕಾಮೆಂಟ್‌ಗಳು