ಚರಣಕೆರಗುವೆನು ಶ್ರೀ ಶಾರದೇ - Charanakeraguvenu Sri Sharade

|| ಶಾರದಾ ಸ್ತುತಿ ||

ಸಾಹಿತ್ಯ : ಜಯಲಕ್ಷ್ಮಿ  ಗಾಂವ್ಕರ್‌ 
ಗಾಯನ : ವೇದಾ ಹೆಗಡೆ




ಚರಣಕೆರಗುವೆನು ಶ್ರೀ ಶಾರದೇ 

ಶರಣು ಬಂದೆನು ಪೊರೆ ದಯಾನಿದೆ ॥ಪ | 


ಅರಿಯೆನು ನಿನ್ನನು ಭಜಿಸಲು ಮಾತೆ 

ಕರುಣಿಸೆನಗೆ ಮತಿ ಲೋಕ ವಿಖ್ಯಾತೆ ॥೧॥ 


ಪುಸ್ತಕ ಧಾರಿಣಿ ವಿದ್ಯಾದಾಯಿನಿ 

ಅಭಯವ ನೀಡಿ ಪೋಷಿಸೆ ಜನನಿ ॥೨॥ 


ಶಂಕರ ಸ್ಥಾಪಿತೆ ಶ್ವೇತಾಂಬರಧರೆ 

ಕಿಂಕರಳಾಗುವೆ ಆಲಿಸೆನ್ನಯ ಮೊರೆ |೩| 


ಕವಿದಿಹ ಗಾಡಾ0ಧಕಾರವ ಓಡಿಸು 

ಸವಿ ನುಡಿ ನುಡಿವಂತೆ ಎನಗೆ ಪ್ರೆರೇಪಿಸು ॥೪॥


ಗಾನವಿಶಾರದೆ ವೀಣಾಪಾಣಿ 

ಜ್ಞಾನವ ನೀಡು ಪನ್ನಗವೇಣಿ ॥೫||


ಹಂಸವಾಹನಳೆ ಬ್ರಹ್ಮನ ರಾಣಿ 

ಧ್ವಂಸ ಮಾಡೆನ್ನೊಳಿದ್ದ ಮಂದಮತಿ ॥೬||


ತುಂಗಾ ತೀರೆ ವಿಹಾರೆ ಕಲಾಧರೆ 

ಶೃಂಗೇರಿ ಪುರ ವಾಸಿತೆ ಮಧುರೆ ॥೭॥


ವಿದ್ಯಾ ಬುದ್ದಿಯ ಕರುಣಿಸು ದಾತೆ 

ಉದ್ದರಿಸೆನ್ನನು ನಾರದ ಮಾತೆ ॥೮॥ 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು