ಏನು ಒಲ್ಲೆ ಹರಿಯೇ ನಿನ್ನ - Enu Olle Hariye Ninna

|| ಹರಿ ಸ್ತುತಿ ||



ಏನು ಒಲ್ಲೆ ಹರಿಯೇ ನಿನ್ನ ಸ್ತುತಿಸಿ ಕೇಳುವುದು ಪ.

ಜ್ಞಾನ ಭಕ್ತಿ ಕೊಡು ಎಮಗೆ ಇದೊಂದೇ ದೊಡ್ಡದು ಅ.ಪ 


ಒಂದು ನೆವದಿಂದ ಎನ್ನ ಕಾಡಿದವರಿಗೆ

ಹೊನ್ನು ಹೆಣ್ಣು ಗಂಡು ಮಕ್ಕಳು ಆಗಲಿ ಅವರಿಗೆ

ಕಂದಿ ಕುಂದಿ ಎನ್ನ ಬಾಧೆ ಪಡಿಸಿದವರಿಗೆ

ಕನ್ಯಾ ದಾನದ ಫಲ ಬಂದು ತಟ್ಟಲಿ ಅವರಿಗೆ || ೧ ||   


ಹಿಂದೆ ನನ್ನ ಬೈದವರೆಲ್ಲಾ ಚೆಂದಾಗಿರಲಿ

ಮುಂದೆ ನನ್ನ ಬೈವುಯವರೆಲ್ಲಾ ಅಂದಣವೇರಲಿ 

ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ

ಬಂದು ಒದ್ದವರಿಗೆ ಭತ್ತದ ಗದ್ದೆ ಬೆಳೆಯಲಿ || ೨ || 


ಜನರೊಳಗೆ ಮಾನಭಂಗ ಮಾಡಿದವರಿಗೆ

ಜೇನು ತುಪ್ಪ ಸಕ್ಕರೆ ಊಟ ಆಗಲಿ ಅವರಿಗೆ

ಹಾನಿ ಬಾರದಂತಹ ಲೋಕ ಆಗಲಿ ಅವರಿಗೆ

ಮಹಾನುಭಾವ ಮುಕ್ತಿಯ ಕೊಡುವ ನೆಲೆಯಾದಿಕೇಶವ||೩||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು